ರಾಜಕೀಯ ಕಾರಣಕ್ಕಾಗಿ ವೀರಶೈವ ವಿದ್ಯಾರ್ಥಿ ನಿಲಯ ಕಾಮಗಾರಿಗೆ ತಡೆ: ವಡ್ಡರಹಳ್ಳಿ ಧನಂಜಯ
Mar 12 2024, 02:00 AM ISTಕಳೆದ 40 ವರ್ಷಗಳಿಂದ ವೀರಶೈವ ಮಹಾಸಭಾ ಬೆರಳೆಣಿಕೆ ಜನರ ಕೈಯಲ್ಲಿದ್ದು ಮಹಾಸಭಾದ ಕಚೇರಿಗೆ ಬೀಗ ಹಾಕಲಾಗಿತ್ತು. ನಾನು ಅಧ್ಯಕ್ಷನಾದ ನಂತರ ಕಚೇರಿ ಬೀಗ ತೆಗೆಸಿ ವೀರಶೈವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದೇನೆ. ಪಟ್ಟಣದ ವೀರಶೈವ ನಿವೇಶನ ವಿಚಾರವಾಗಿ ನ್ಯಾಯಾಲಯದಲ್ಲಿ 9 ಪ್ರಕರಣಗಳಿದ್ದು ನನ್ನ ಸ್ವಂತ ಹಣದಿಂದ ಈಗಾಗಲೇ 6 ಪ್ರಕರಣಗಳು ಇತ್ಯರ್ಥವಾಗಿದೆ. ಮೂರು ಪ್ರಕರಣಗಳೂ ಮುಕ್ತಾಯದ ಹಂತಕ್ಕೆ ಬಂದಿವೆ.