ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಇಂದು ಪ್ರತಿಭಟನೆ
Jul 02 2024, 01:39 AM ISTರಾಜ್ಯ ಸರ್ಕಾರವು ಹಾಲಿನ ದರ ಏರಿಸಿದೆ. ರೈತರಿಗೆ ವರ್ಷಕ್ಕೆ 4 ಸಾವಿರಗಳನ್ನು ಕೊಡುತ್ತಿದ್ದ ಹಾಲಿನ ಹಣವನ್ನು ಸಹ ಸರ್ಕಾರ ತಡೆದಿದೆ. ಪೆಟ್ರೋಲ್, ಡೀಸೆಲ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೂ ಉಪಯೋಗಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು 25 ಸಾವಿರದಿಂದ 2 ಲಕ್ಷಗಳವರೆಗೂ ಏರಿಸಿದೆ. ಭ್ರಷ್ಟಾಚಾರವು ಮಿತಿ ಮೀರಿದ್ದು ಪರಿಶಿಷ್ಟ ಪಂಗಡ ನಿಗಮಕ್ಕೆ ನೀಡಿದ್ದ 187 ಕೋಟಿಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಗುಳುಂ ಮಾಡಿರುತ್ತಾರೆ. ಇದೆಲ್ಲದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಬಿಜೆಪಿ ಜಿಲ್ಲಾ ರೈತ ಮೋರ್ಚ ಜಿಲ್ಲಾಧ್ಯಕ್ಷ ಬಿ. ಎಚ್. ನಾರಾಯಣಗೌಡ ತಿಳಿಸಿದ್ದಾರೆ.