ಹಾಸನದ ಗೊರೂರು ಅಣೆಕಟ್ಟೆ ನೀರು ತುಮಕೂರಿಗೆ ಹರಿಸುತ್ತಿರುವ ರಾಜ್ಯ ಸರ್ಕಾರ..!
Mar 19 2024, 12:46 AM ISTಹಾಸನ ಜಿಲ್ಲೆಯ ಗೊರೂರು ಅಣೆಕಟ್ಟೆ ನೀರನ್ನು ಹಾಸನ ಮತ್ತು ಮಂಡ್ಯ ಜಿಲ್ಲೆಗಳಿಗೆ ಹರಿಸದೇ ತುಮಕೂರು ಜಿಲ್ಲೆಗೆ ಹರಿಸುವ ಮೂಲಕ ತುಮಕೂರಿಗೆ ಬೆಣ್ಣೆ, ಮಂಡ್ಯ ಮತ್ತು ಹಾಸನಕ್ಕೆ ಸುಣ್ಣ ಹಾಕಲು ಸರ್ಕಾರ ಹೊರಟಿದೆ. ಮಂಡ್ಯ ಜಿಲ್ಲೆ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ತುಮಕೂರು ರಾಜಕಾರಣ ಗಟ್ಟಿಯಾಗಿದೆ. ಅಲ್ಲಿನ ರೈತರನ್ನು ಉಳಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡುತ್ತಿದ್ದಾರೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ಜನರನ್ನು ಬಲಿಕೊಡಲಾಗುತ್ತಿದೆ.