ಡಿಸೆಂಬರ್ 15ರಿಂದ ಸಿಂಧನೂರ ಹುಬ್ಬಳ್ಳಿ ರೈಲು ಸಂಚಾರ-ಕರಡಿ ಸಂಗಣ್ಣ
Nov 23 2023, 01:45 AM ISTಗಿಣಿಗೇರಾ ಮೆಹಬೂಬ್ನಗರ ರೈಲ್ವೆ ಲೈನ್ ಕಾಮಗಾರಿ ಸಿಂಧನೂರುವರೆಗೆ ಪೂರ್ಣಗೊಂಡಿದೆ. ಡಿ.15ಕ್ಕೆ ಸಿಂಧನೂರಿಗೆ ರೈಲು ಸಂಚಾರ ಮತ್ತು ಗದಗ ವಾಡಿ ಮಾರ್ಗದಲ್ಲಿ ಕುಷ್ಟಗಿ ಪಟ್ಟಣಕ್ಕೆ ಜನೇವರಿಯಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಹತ್ತಾರು ರೀತಿಯ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಿಷ್ಕಿಂಧೆ ಪ್ರದೇಶವಾಗಿರುವ ಗಂಗಾವತಿಯಿಂದ ಅಯೋಧ್ಯೆವರೆಗೂ ನೇರ ರೈಲು ಸಂಚಾರ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಸಂಸದರು ಹೇಳಿದರು.