ಗೋವಾ ಜೈಲ್ನಿಂದ ಎಸ್ಕೇಪ್ ಮಾಡಿಸಿದ್ದ ಪೇದೆಗೆ ಕೈಕೊಟ್ಟ ಕುಖ್ಯಾತ ರೌಡಿ!
Dec 15 2024, 02:04 AM ISTಸುಲೇಮಾನ್ ಸಿದ್ದಿಕಿ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತ ಅಂತಾರಾಜ್ಯ ಅಪರಾಧಿಯಾಗಿದ್ದು ಇವನಿಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಪೇದೆ ಅಮಿತ್ ನಾಯಕ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆ, ಕೊಲೆಯತ್ನ, ಜೀವ ಬೆದರಿಕೆ, ಹಲ್ಲೆ, ವಂಚನೆ, ಭೂ ಮಾಫಿಯಾದಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಸುಲೇಮಾನ್ ಸಿದ್ದಿಕಿಯ ಮೇಲೆ ಹೈದ್ರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ.