ಧಾರವಾಡ ಜಿಲ್ಲೆಯ ಮುಸ್ಲಿಂ ಸಮುದಾಯದ ಅನೇಕ ಸಣ್ಣ ರೈತರ ಜಮೀನಿನ ಪಹಣಿಗಳಿಗೂ ಈ ವಕ್ಫ್ ಹೆಸರು ಸೇರ್ಪಡೆಯಾಗಿದ್ದು ಅವರಲ್ಲೂ ಆತಂಕ ಸೃಷ್ಟಿಯಾಗಿದೆ. ಆ ಮೂಲಕ ಮುಸ್ಲಿಂ ಸಮಾಜ ಸಹ ತಮ್ಮದೇ ವಕ್ಫ್ ಮಂಡಳಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ವಕ್ಫ್ ಆಸ್ತಿ ಗದ್ದಲ ವಿವಾದದ ಸ್ವರೂಪಕ್ಕೆ ತಿರುಗಿ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಚಲುವರಾಯಸ್ವಾಮಿ ಸೇರಿ ಹಲವು ಸಚಿವರು ಪ್ರತಿಪಕ್ಷಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ರೈತರ ಆಸ್ತಿ ಕಿತ್ತುಕೊಳ್ಳಲ್ಲ ಎಂದು ಭರವಸೆ ನೀಡಿದ್ದಾರೆ.