• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕೋಲಾರದಲ್ಲಿಯೂ ಹಿಂದೂ ದೇವಾಲಯ, ಶಾಲೆ ಮತ್ತು ಸರ್ಕಾರಿ ಭೂಮಿ ವಕ್ಫ್‌ ಬೋರ್ಡ್‌ಗೆ ‘ಜಮೀರ್ ಈಗಿನ ಕಾಲದ ಟಿಪ್ಪು’

Oct 30 2024, 12:50 AM IST
ವಿಜಯಪುರದ ರೀತಿಯಲ್ಲೇ ಕೋಲಾರದಲ್ಲಿಯೂ ಹಿಂದೂಗಳ ದೇವಾಲಯ, ಸರ್ಕಾರದ ಶಾಲೆ ಮತ್ತು ಇತರ ಸರ್ಕಾರಿ ಭೂಮಿಯನ್ನು ವಕ್ಫ್‌ ಬೋರ್ಡ್‌ಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆಲ್ಲ ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ವಜನಪಕ್ಷಪಾತವೇ ಕಾರಣ ಎಂಬುದು ಮಾಜಿ ಸಂಸದ ಮುನಿಸ್ವಾಮಿ ಅವರ ಆರೋಪ.

ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು, ಸಮಸ್ಯೆಗೆ ಶೀಘ್ರ ಪರಿಹಾರಕ್ಕೆ ಡಿಸಿ ಸೂಚನೆ

Oct 30 2024, 12:47 AM IST
ರೈತರ ಬೆಂಬಲಕ್ಕೆ ಹಲವರು ನಿಂತಿದ್ದು, ರೈತರೊಂದಿಗೆ ಬುಧವಾರ ಶ್ರೀರಾಮಸೇನೆಯು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಸಿದ್ಧವಾದರೆ, ಬಿಜೆಪಿ ಮುಖಂಡರ ನಿಯೋಗವು ಮಂಗಳವಾರ ಸಂಜೆ ಗ್ರಾಮದ ರೈತರ ಮನೆಗಳಿಗೆ ಹೋಗಿ ರೈತರೊಂದಿಗೆ ಈ ಕುರಿತು ಸಮಾಲೋಚನೆ ಮಾಡಿದೆ.

ವಕ್ಫ್‌ ಹೆಸರಲ್ಲಿ ಬಿಜೆಪಿಯಿಂದ ಗೊಂದಲ ಸೃಷ್ಟಿ

Oct 30 2024, 12:45 AM IST
ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್ ಹೆಸರಿನಲ್ಲಿ ಬಿಜೆಪಿಯವರು ರಾಜ್ಯದಲ್ಲಿ ಗೊಂದಲ‌ ಸೃಷ್ಟಿ ಮಾಡುತ್ತಿದ್ದು, ಕಾಂಗ್ರೆಸ್‌ನವರು ನೋಟಿಸ್‌ ಕೊಡುವ ಮೂಲಕ ರೈತರಿಗೆ ತೊಂದರೆ ಮಾಡುತ್ತಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದ ವೇಳೆ ರೈತರ ಜಮೀನುಗಳನ್ನು ವಾಪಸ್ ಪಡೆದು, ವಕ್ಫ್ ಆಸ್ತಿ ಎಂದು ಸೇರಿಸಿರುವ ಇತಿಹಾಸ ಇವೆ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆರೋಪಿಸಿದರು.

ರೈತರ ಭೂಮಿ ಕಸಿಯುವ ವಕ್ಫ್‌ ಬೋರ್ಡ್‌ಗೆ ಜಮೀರ್‌ ಕುಮ್ಮಕ್ಕು

Oct 30 2024, 12:44 AM IST
ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ವಕ್ಫ್ ಬೋರ್ಡ್‌ ಕಿತಾಪತಿಗೆ ಸಚಿವ ಜಮೀರ್ ಅಹಮ್ಮದ್ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ಜಮೀರ್‌ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದರು. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್ ಬೋರ್ಡ್‌ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮಕ್ಕು ಕೊಡುವ ಕೆಲಸ ಜಮೀರ್ ಅಹಮ್ಮದ್ ಮಾಡುತ್ತಿರುವುದು ದುರದೃಷ್ಟಕರ ಎಂದರು.

ವಕ್ಫ್‌ ನೋಟಿಸ್‌: ರೈತರಿಂದ ಕರಾಳ ದೀಪಾವಳಿ ಆಚರಣೆ

Oct 30 2024, 12:44 AM IST
ಕನ್ನಡಪ್ರಭ ವಾರ್ತೆ ವಿಜಯಪುರ ಜನರು ದೀಪಾವಳಿ ಆಚರಣೆ ಸಂದರ್ಭದಲ್ಲಿ ಸರ್ಕಾರವು ವಕ್ಫ್ ಬೋರ್ಡ್ ಹೆಸರನ್ನು ರೈತರ ಜಮೀನಿನ ಪಹಣಿಯಲ್ಲಿ ನಮೂದು ಮಾಡಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಧರಣಿಗೆ ನಡೆಸುತ್ತಿದ್ದಾರೆ.

ವಕ್ಫ್‌ ಮಂಡಳಿ ಹೆಸರಿನ ಆಸ್ತಿ ಅಲ್ಲಾನ ಆಸ್ತಿನಾ?: ಜೋಶಿ ಕಿಡಿ

Oct 30 2024, 12:39 AM IST
ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ಬರಲು ಕಾಂಗ್ರೆಸ್ ಮತ್ತು ಜಮೀರ್ ಅಹ್ಮದ್ ಕುಮ್ಮಕ್ಕು ಇದೆ. ಇವರೆಲ್ಲರೂ ಸೇರಿ ಜನರನ್ನು ಭಯಭೀತ ಮಾಡುತ್ತಿದ್ದಾರೆ. ಅನ್ವರ್ ಮಲ್ಪಾಡಿ ವರದಿಯಲ್ಲಿ ಆಸ್ತಿ ಕಬಳಿಕೆ ಪ್ರಸ್ತಾಪ ಇದೆ. ಅನೇಕ ಕಾಂಗ್ರೆಸ್ ಮುಖಂಡರು ವಕ್ಫ್‌ ಆಸ್ತಿ ತಮ್ಮದು ಮಾಡಿಕೊಂಡಿದ್ದಾರೆ ಎಂದು ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ವಿಜಯಪುರ: 41 ಪಹಣಿಯಲ್ಲಿ ವಕ್ಫ್‌ ಹೆಸರು ಡಿಲೀಟ್

Oct 30 2024, 12:35 AM IST
ವಕ್ಫ್‌ ಆಸ್ತಿಗೆ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಜೊತೆಗೆ ಇಂದೀಕರಣ ಪೂರ್ಣಗೊಳಿಸಬೇಕೆಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅವರು ತಿಳಿಸಿದರು.

ರೈತರಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡುವ ಕ್ರಮ ಹಿಂಪಡೆಯಬೇಕು

Oct 30 2024, 12:34 AM IST
ರಾಜ್ಯ ಸರ್ಕಾರ ಕೂಡಲೇ ವಕ್ಫ್‌ ಮಂಡಳಿ ಸಂಬಂಧ ರೈತರಿಗೆ ನೋಟಿಸ್ ನೀಡುವ ಕ್ರಮ ಹಿಂಪಡೆಯಬೇಕು. ವಕ್ಫ್‌ ಮಂಡಳಿಯನ್ನು ರಾಜ್ಯ ಮತ್ತು ದೇಶದಲ್ಲಿಯೇ ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ವಕ್ಫ್‌ ಆಸ್ತಿ ವಿವಾದ ಸಂಬಂಧ ರೈತರಿಗೆ ನೀಡಿದ ವಕ್ಫ್‌ ನೋಟಿಸ್‌ ವಾಪಸ್‌ : ಸಿಎಂ ಸಿದ್ದರಾಮಯ್ಯ

Oct 30 2024, 12:34 AM IST
ವಕ್ಫ್‌ ಆಸ್ತಿ ವಿವಾದ ಸಂಬಂಧ ವಿಜಯಪುರದ ಯಾವುದೇ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸುವುದಿಲ್ಲ, ಈ ಕುರಿತು ನೋಟಿಸ್‌ ನೀಡಿದ್ದರೆ ಅದನ್ನು ವಾಪಸ್‌ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಕ್ಫ್‌ ಬೋರ್ಡ್‌ ಆಸ್ತಿ ಹೆಚ್ಚಳವಾಗಲು ಹೇಗೆ ಸಾಧ್ಯ?

Oct 30 2024, 12:32 AM IST
ಸ್ವಾತಂತ್ರ್ಯ ಪೂರ್ವದಲ್ಲಿ ವಕ್ಫ್‌ ಬೋರ್ಡ್‌ ಆಸ್ತಿ ಒಂದು ಲಕ್ಷ ಎಕರೆಯಷ್ಟಿತ್ತು. ಈಗ ಅದು 8 - 10 ಲಕ್ಷ ಎಕರೆಯಾಗಿದೆ ಅಂದರೆ ಹೇಗೆ ಸಾಧ್ಯ? ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದರು.
  • < previous
  • 1
  • ...
  • 21
  • 22
  • 23
  • 24
  • 25
  • 26
  • 27
  • 28
  • 29
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved