ಕಲ್ಲುಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ
May 20 2025, 01:34 AM ISTಅರಸೀಕೆರೆ ತಾಲೂಕಿನ ಕಣ್ಣಕಟ್ಟೆ ಹೋಬಳಿಯ ಕಲ್ಲುಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ವಾಲೇಹಳ್ಳಿ ಫೀಡರ್ ಸಿದ್ಧವಾಗಿದ್ದು ಇದಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಚಾಲನೆ ನೀಡಿದರು. ಈ ಹೊಸ ಫೀಡರ್‌ನಿಂದಾಗಿ ವಾಲೇಹಳ್ಳಿ, ಬೈರಾಪುರ, ರಂಗನಾಯಕನಕೊಪ್ಪಲು, ಕಲ್ಲುಗುಂಡಿ, ಕಲ್ಲುಸಾಧಾರಹಳ್ಳಿ ಹಾಗೂ ಸುತ್ತಮುತ್ತಲಿನ ರೈತರಿಗೆ ಅನುಕೂಲ ವಾಗಲಿದೆ ಎಂದರು. ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ ಇನ್ನು ಮುಂತಾದ ಅಧಿಕಾರಿಗಳು ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.