ವೈದ್ಯಕೀಯ ಕ್ಷೇತ್ರದಲ್ಲಿ ಕನಕರಡ್ಡಿಯವರ ಪಾತ್ರ ಅಪಾರ: ಸಚಿವ ಎಚ್.ಕೆ. ಪಾಟೀಲ
Sep 01 2025, 01:04 AM ISTವೈದ್ಯಕೀಯ ಸೇವೆಯಲ್ಲಿ ಡಾ. ವೆಂಕಪ್ಪನವರು ಬಡ ಜನರಿಗೆ ನೀಡಿರುವ ಗುಣಮಟ್ಟದ ಚಿಕಿತ್ಸೆ ಅಪಾರ. ಅದು ಇಂದಿಗೂ ಜನರ ಮನಸ್ಸಲ್ಲಿ ನೆಲೆ ಮಾಡಿರುವುದು ಶ್ಲಾಘನೀಯ. ಬಡವರಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಜೊತೆಗೆ ಒಳ್ಳೆಯ ವ್ಯಕ್ತಿತ್ವವಿದ್ದರೆ ಅದು ಕನಕರಡ್ಡಿಯವರದು. ಗ್ರಾಮೀಣ ಭಾಗದ ಜನರಿಗೆ ಅನುಕೂಲಕ್ಕಾಗಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ನುರಿತ ವೈದ್ಯರನ್ನು ಸೇರಿಸಿಕೊಂಡು ಅತ್ಯುತ್ತಮ ಚಿಕಿತ್ಸೆ ನೀಡಲಿ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.