ರಾಜ್ಯ ಶಿಕ್ಷಣ ನೀತಿ ಸಮಿತಿ ಏನಾಯಿತು: ಬರಗೂರು ರಾಮಚಂದ್ರಪ್ಪ ಪ್ರಶ್ನೆ
Mar 02 2025, 01:15 AM ISTರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಿದೆ ಎಂಬ ಕಾರಣಕ್ಕೆ ಎಸ್ಇಪಿ ಜಾರಿಗೆ ಸರ್ಕಾರ ಮುಂದಾಯಿತು. ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿತು. ಆ ಸಮಿತಿ ನೀಡಿರುವ ೧೪ ಪುಟಗಳ ವರದಿ ವೇಳಾಪಟ್ಟಿಯಂತಿದೆ. ನಂತರದಲ್ಲಿ ಆ ಸಮಿತಿ ಏನಾಯಿತೊ ಗೊತ್ತಿಲ್ಲ. ಇದುವರೆಗೂ ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರದಿಂದ ಜಾರಿಗೆ ತರಲು ಸಾಧ್ಯವಾಗಿಲ್ಲ.