ಶೃಂಗೇರಿ-ಹಾಗಲಗಂಚಿ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯ
Jun 26 2024, 12:38 AM ISTತಾಲೂಕಿನ ಗಡಿಕಲ್ಲು, ಹಂಚಿನಕೊಡಿಗೆ, ಹಾಗಲಗಂಚಿ ಸಂಪರ್ಕ ರಸ್ತೆ ಕಳೆದ ಹಲವು ವರ್ಷಗಳಿಂದ ಡಾಂಬಾರೀಕರಣಗೊಳ್ಳದೇ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಇತ್ತೀಚೆಗೆ ಭಾರೀ ಮಳೆಯಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಗ್ರಾಮಸ್ಥರು ನರಕ ಯಾತನೆ ಅನುಭವಿಸುವಂತಾಗಿದೆ.ಈ ರಸ್ತೆ ಮೇಗೂರು, ನೆಮ್ಮಾರು ಸುತ್ತಮುತ್ತಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಕಳೆದ ಅನೇಕ ವರ್ಷಗಳಿಂದ ಡಾಂಬರೀಕರಣಗೊಳ್ಳದೇ ಈಗ ಮಣ್ಣು ರಸ್ತೆಯಾಗಿ ಮಾರ್ಪಟ್ಟಿದೆ.