17ರಂದು ಶೃಂಗೇರಿ, ಕೊಪ್ಪ ಬಂದ್: ಪಾದ ಯಾತ್ರೆ, ಪ್ರತಿಭಟನಾ ಸಭೆ
Aug 16 2024, 12:53 AM ISTನರಸಿಂಹರಾಜಪುರ, ಜಂಟಿ ಸರ್ವೆ ಕಾರ್ಯ ಆಗುವುವರೆಗೆ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಹಾಗೂ ಕಂದಾಯ ಭೂಮಿ ತೆರವು ಕಾರ್ಯಾಚರಣೆ ಸ್ಥಗಿತ ಮಾಡಬೇಕು, ಅರಣ್ಯ ಹಾಗೂ ಕಂದಾಯ ಕಾಯ್ದೆ ಹೆಸರಿನಲ್ಲಿ ಮಲೆನಾಡಿನ ರೈತರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಆ. 17 ರ ಶನಿವಾರ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ಹಾಗೂ ಖಾಂಡ್ ಹೋಬಳಿಗೆ ಬಂದ್ ಕರೆ ನೀಡಿದ್ದೇವೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್ ನಾಗೇಶ್ ತಿಳಿಸಿದರು.