ಸಂವಿಧಾನ ವಿರೋಧಿ ಹೇಳಿಕೆಗಳು ಸಲ್ಲದು: ಓಬಳೇಶ
Dec 01 2024, 01:34 AM ISTಪೇಜಾವರ ಶ್ರೀಗಳು ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ, ಇಂತಹ ಸಂವಿಧಾನ ನಮಗೆ ಬೇಡ ಎಂದಿದ್ದಾರೆ. ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಹ ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕೆಂಬ ಹೇಳಿದ್ದಾರೆ. ಅಲ್ಲದೇ, ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಕುರಿತು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಸಭಾ, ಶರಣ ಸಾಹಿತ್ಯ ಪರಿಷತ್ತು, ಜಾಗೃತ ಭಾರತ ವಿಚಾರ ವೇದಿಕೆ ತೀವ್ರವಾಗಿ ಖಂಡಿಸುತ್ತವೆ ಎಂದು ವೇದಿಕೆ ಸಂಚಾಲಕ ಕೆ.ಎ. ಓಬಳೇಶ ಹೇಳಿದ್ದಾರೆ.