ಎಲ್ಲರಿಗೂ ಸರಿಸಮಾನ ಹಕ್ಕು ನೀಡಿದ ಭಾರತೀಯ ಸಂವಿಧಾನ: ಶಾಸಕ ಜಗದೀಶ ಗುಡಗುಂಟಿ
Jan 28 2024, 01:19 AM ISTಜಮಖಂಡಿ: ಜಾತಿ, ಮತ ಎನ್ನದೆ ಎಲ್ಲರೂ ಸರಿಸಮಾನವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಸಂವಿಧಾನ ರಚಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸ್ವಚ್ಛ, ಶಸಕ್ತ, ಸುಭದ್ರ ಭಾರತವನ್ನಾಗಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮ ಅವಿಸ್ಮರಣೀಯ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಆಶ್ರಯದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.