ಜಿಲ್ಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
Jan 29 2024, 01:32 AM ISTವಿನೋಬ ನಗರದಲ್ಲಿ 1.06 ಕೋಟಿ ವೆಚ್ಚದ ಅಡ್ಡ ರಸ್ತೆಗಳಿಗೆ ಸಿಸಿ ಚರಂಡಿ, 8 ಲಕ್ಷ ರು ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಬಾಕ್ಸ್ ಚರಂಡಿ ಮಾಡಿ, ಅವುಗಳನ್ನು ಮುಚ್ಚುವುದಕ್ಕಿಂತಲೂ ಎಲ್ ಶೇಪ್ನಲ್ಲಿ ಚರಂಡಿ ಮಾಡಿ. ಚರಂಡಿಗಳು ತೆರೆದಿದ್ದರೆ, ಕಸ ನಿಲ್ಲುವುದಿಲ್ಲ. ಕಸ ತೆಗೆಯುವ ಸ್ವಚ್ಛತಾ ಸಿಬ್ಬಂದಿಗೂ ಕಷ್ಟವಾಗುವುದಿಲ್ಲ. ಬಾಕ್ಸ್ ಚರಂಡಿಗಳನ್ನು ನಿರ್ಮಿಸಲು ಹಣವೂ ಹೆಚ್ಚು ಖರ್ಚಾಗುತ್ತದೆ.