ಒಂದು ವಿಭಾಗದ ವ್ಯಾಪ್ತಿಗೆ ಮಂಗಳೂರು ರೈಲ್ವೆ ಪ್ರದೇಶದ ಆಡಳಿತ: ಸಚಿವ ಸೋಮಣ್ಣ ಇಂಗಿತ
Apr 13 2025, 02:01 AM ISTದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೆ ಈ ಮೂರು ವಿಭಾಗಗಳನ್ನು ಮಂಗಳೂರು ರೈಲ್ವೆ ಪ್ರದೇಶ ಒಳಗೊಂಡಿದೆ. ಇದರಿಂದಾಗಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಿವಾರಿಸಲು ಮಂಗಳೂರು ರೈಲ್ವೆ ಪ್ರದೇಶವನ್ನು ಯಾವುದಾದರೂ ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.