ಸರ್ಕಾರ-ಅತಿಥಿ ಉಪನ್ಯಾಸಕರ ಹಗ್ಗ ಜಗ್ಗಾಟ<bha>;</bha> ವಿದ್ಯಾರ್ಥಿಗಳ ಪರದಾಟ
Dec 16 2023, 02:00 AM ISTಕಾಯಂ ಮಾಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮುಷ್ಕರವು ಶುಕ್ರವಾರಕ್ಕೆ ೨೨ ದಿನಗಳು ಕಳೆದಿರುವುದರಿಂದ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವ ಪರಿಸ್ಥಿತಿ ಒದಗಿಬಂದಿದೆ.ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆಯೂ ಕಾಡುತ್ತಿದ್ದು, ಪಾಠ ಮಾಡಲು ತೊಂದರೆ ಉಂಟಾಗಿದೆ. ಜನವರಿ ಅಂತ್ಯದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೆಲ ಕಾಲೇಜುಗಳಲ್ಲಿ ಇಲ್ಲಿವರೆಗೆ ಶೇ.೫೦ರಷ್ಟು ಪಾಠ ಕೂ[ ಪೂರ್ತಿಯಾಗಿಲ್ಲ.