ಕುಕನೂರಿಗೆ ಇಂದಿರಾ ಕ್ಯಾಂಟೀನ್ ಮಂಜೂರು-₹1.54 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸರ್ಕಾರ ಆದೇಶ
Dec 08 2023, 01:45 AM ISTಬಡ ವರ್ಗದವರಿಗೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಊಟ ಸಿಗಲಿ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ನಗರ, ಪಟ್ಟಣ ಕೇಂದ್ರಗಳಲ್ಲಿ ಈ ಹಿಂದೆ ಆರಂಭಿಸಿತ್ತು. ಇದರಿಂದ ಶ್ರಮಿಕ ವರ್ಗಕ್ಕೆ ಹಾಗೂ ಬಡ ವರ್ಗಕ್ಕೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ಸಿಗುತ್ತಿತ್ತು. ಇನ್ನು ಹಲವೆಡೆ ಕ್ಯಾಂಟೀನ್ ಬೇಡಿಕೆ ಹೆಚ್ಚಿತ್ತು. ಅಂತಹ ಅವಶ್ಯಕ ಕೇಂದ್ರಗಳಲ್ಲಿ ಕುಕನೂರು ಪಟ್ಟಣಕ್ಕೂ ಕ್ಯಾಂಟೀನ್ ಅವಶ್ಯಕತೆ ಇತ್ತು. ನಿತ್ಯ ಪಟ್ಟಣಕ್ಕೆ ವ್ಯಾಪಾರ, ವಹಿವಾಟು, ಶಾಲಾ, ಕಾಲೇಜು, ಎಪಿಎಂಸಿ ಮಾರುಕಟ್ಟೆ, ಕಚೇರಿಗಳಿಗೆ ಬರುವ ಜನರು, ಕಾರ್ಮಿಕರು ಹೀಗೆ ಜನಜಂಗುಳಿಯಿಂದ ಕುಕನೂರು ತುಂಬಿರುತ್ತದೆ. ಹೊಟೆಲ್ ಗಳಲ್ಲಿ ದುಬಾರಿ ಬೆಲೆಗೆ ಆಹಾರ ಸೇವಿಸುವ ಅನಿವಾರ್ಯತೆ ಇತ್ತು. ಈ ಸಮಸ್ಯೆ ನೀಗಿದಂತಾಗಿದೆ.