ರೈತರ ಹಿತ ಕಾಪಾಡದ ರಾಜ್ಯ ಸರ್ಕಾರ
Nov 09 2023, 01:01 AM ISTರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡದೆ ಮೋಜು-ಮಸ್ತಿಯಲ್ಲಿ ಮುಳುಗಿದೆ. ಈ ಸರ್ಕಾರ ರೈತರ ಪಾಲಿಗೆ ಇದ್ದು ಸತ್ತಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು. ತಾಲೂಕಿನ ಹಿರೇಅರಳಿಹಳ್ಳಿ, ಹೊಸೂರು, ಬೇವೂರು ಗ್ರಾಮಗಳ ರೈತರ ಜಮೀನುಗಳಲ್ಲಿ ಬಿಜೆಪಿ ವತಿಯಿಂದ ಬರ ಅಧ್ಯಯನ ನಡೆಸಿ ಅವರು ಮಾತನಾಡಿದರು.