ನ್ಯಾಯದಾನ ಪ್ರಕ್ರಿಯೆ ಜೊತೆ ಸಾಮಾಜಿಕ ಬದ್ಧತೆ ಸಣ್ಣ ವಿಚಾರವಲ್ಲ: ನ್ಯಾ.ಕೃಷ್ಣ ದೀಕ್ಷಿತ್
Jun 10 2024, 12:32 AM ISTನೂರು ವರ್ಷ ಮನುಷ್ಯನ ಬದುಕಿನಲ್ಲಿ ದೀರ್ಘ ಕಾಲವಾಗಿದ್ದರೂ ಸಂಸ್ಥೆ, ದೇಶದ ವಿಷಯದಲ್ಲಿ ದೊಡ್ಡದು ಎನ್ನಿಸುವುದಿಲ್ಲ.ಸಾಗರದಂತಹ ಊರಿನಲ್ಲಿ ಸ್ವಾತಂತ್ರ್ಯ ಬರುವುದಕ್ಕೂ ೨೫ ವರ್ಷ ಮೊದಲೇ ವಕೀಲಿಕೆ ವೃತ್ತಿ ಪ್ರಾರಂಭಿಸಿ, ಸಾಮಾಜಿಕ ಬದ್ಧತೆಯೊಂದಿಗೆ ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಣ್ಣ ವಿಚಾರವಲ್ಲ. ಅಲ್ಲದೆ ಇಲ್ಲಿಯೇ ಕಾನೂನು ಕಚೇರಿ ತೆರೆದು, ನೂರು ವರ್ಷ ಕಾಲ ಕಕ್ಷಿದಾರರು, ವಕೀಲರ ಭರವಸೆ ಉಳಿಸಿಕೊಂಡು ಬರುವುದು ನಮಗೆಲ್ಲ ಖುಷಿಯ ಸಂಗತಿ. ಊರಿನ ಇತಿಹಾಸ ಬರೆಯುವಾಗ ಈ ಕಾರ್ಯಾಲಯದ ಉಲ್ಲೇಖವೂ ಬರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ ಎಂದರು.