ವಚನಗಳ ಮೂಲಕವೇ ಸಾಮಾಜಿಕ ಕ್ರಾಂತಿ: ಪ್ರಭುಶ್ರೀ
Apr 16 2024, 01:03 AM ISTಮಹಾಲಿಂಗಪುರ: ಆದ್ಯ ವಚನಕಾರ ದೇವಾಂಗ ಸಮಾಜದ ಆರಾಧಕ ದೇವರ ದಾಸಿಮಯ್ಯನವರ ಆದರ್ಶ ಮನುಕುಲಕ್ಕೆ ಸಂದೇಶ ನೀಡಿದೆಯಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಸ್ವಾಮಿಗಳು ಹೇಳಿದರು. ಚಿಮ್ಮಡ ಗ್ರಾಮದ ದಾಸಿಮಯ್ಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಾಸಿಮಯ್ಯನವರು ಒಂದೇ ಕುಲಕ್ಕೆ ಸಿಮಿತ ವಾಗಿರದೆ ಇಡೀ ಮನುಕುಲಕ್ಕೇ ಸಂದೇಶ ನೀಡುವ ಮಹಾನ್ ವ್ಯಕ್ತಿಯಾಗಿದ್ದರು. ಅವರ ವಚನ ಸಾಹಿತ್ಯ ನಾಡಿನೆಲ್ಲೆಡೆ ಮನೆಮಾತಾಗಿದ್ದು, ವಚನಗಳ ಮೂಲಕವೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದರು.