ಸಾಹಿತ್ಯ-ಸಂಸ್ಕೃತಿ ಸಂಘಟಕ ‘ಪ್ರೊ.ಬಿ.ಜಯಪ್ರಕಾಶಗೌಡ’
Feb 14 2024, 02:20 AM ISTಮಂಡ್ಯದ ಹವ್ಯಾಸಿ ರಂಗಭೂಮಿಯನ್ನು ಹೊಸ ಆಯಾಮದೊಂದಿಗೆ ಶ್ರೀಮಂತಗೊಳಿಸಲು ಪ್ರೊ.ಜಯಪ್ರಕಾಶಗೌಡರು ಮಾಡಿದ ಸಂಕಲ್ಪ ಕೆ.ವಿ.ಶಂಕರಗೌಡರ ಹತ್ತಿರದ ಒಡನಾಟವನ್ನು ತಂದುಕೊಟ್ಟಿತು. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಕಾರಣರಾದರು. ಅದಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯೇ ಗೆಳೆಯರ ಬಳಗ. ಈ ಸಂಘಟನೆಯ ಮೂಲಕ ಜಿಲ್ಲೆಯ ಕಲಾವಿದರನ್ನು, ಪ್ರೇಕ್ಷಕರನ್ನು ಹೊಸ ಅಲೆಯ ನಾಟಕಗಳಿಗೆ ಸಜ್ಜುಗೊಳಿಸಿದ್ದಲ್ಲದೆ, ರಾಜ್ಯದ ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿದರು.