ಪಡಿತರ ಅಕ್ಕಿ ಅಕ್ರಮ- ಸಿಐಡಿ ತನಿಖೆಗೆ ಸದನದಲ್ಲಿ ಶಾಸಕ ಕಂದಕೂರು ಆಗ್ರಹ
Dec 13 2023, 01:00 AM ISTಜಿಲ್ಲೆಯಲ್ಲಿ ನಡೆದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂತೆ ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಯಲ್ಲಿನ ಕೋಟ್ಯಂತರ ರುಪಾಯಿ ಅಕ್ಕಿ ದಾಸ್ತಾನು ಕಳವಾಗಿದೆ. ಅಕ್ರಮ ಪ್ರಕರಣಗಳು ಜಿಲ್ಲೆಯಲ್ಲಿ ಪದೇ ಪದೆ ನಡೆಯುತ್ತಿರುವುದಕ್ಕೆ ಲಗಾಮು ಹಾಕಬೇಕು ಎಂದು ಅವರು ಆಗ್ರಹಿಸಿದರು.