ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Dec 23 2023, 01:46 AM ISTಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆಮೈಸೂರುಕ್ರಿಸ್ ಮಸ್ ಮತ್ತು ನೂತನ ವರ್ಷಾಚರಣೆ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಅರಮನೆ ಆವರಣದಲ್ಲಿ ವಿವಿಧ ಹೂವುಗಳಿಂದ ನಿರ್ಮಿಸಿರುವ ಗಂಡು ಬೇರುಂಡ, ಗುಲಾಬಿ, ಸೇವಂತಿಗೆ, ಚೆಂಡುಮಲ್ಲಿಗೆ ಮುಂತಾದ ಹೂ ಬಳಸಿಕೊಂಡು ಟಾಂಗಾ ಗಾಡಿ ನಿರ್ಮಿಸಲಾಗಿದೆ.ಇತ್ತೀಚೆಗಷ್ಟೇ ಯುನೆಸ್ಕೋ ದಿಂದ ಗುರುತಿಸಲ್ಪಟ್ಟ ಸೋಮನಾಥಪುರ ದೇವಾಲಯದ ಮಾದರಿಯನ್ನು ನಿರ್ಮಿಸಲಾಗಿದೆ. ದೇವಾಲಯ, ಅರಮನೆ ಮುಂತಾದ ಅನೇಕಾರು ಕಲಾಕೃತಿಗಳನ್ನು ರಚಿಸಲಾಗಿದೆ.