ಜಿಲ್ಲೆಯ ಶಾಲೆ, ಆಸ್ಪತ್ರೆಗಳಿಗೆ ಕಡ್ಡಾಯ ನೀರಿನ ಸಂಪರ್ಕ ಕಲ್ಪಿಸಿ: ಜಿಪಂ ಸಿಇಒ ಸುರೇಶ್ ಇಟ್ನಾಳ್
Feb 27 2024, 01:33 AM ISTಗ್ರಾಮೀಣ ಕುಡಿಯುವ ನೀರಿನ ವಿಭಾಗದಿಂದ ಕೊರೆಯುವ ಕೊಳವೆಬಾವಿಗಳ ಯಾವ ಯೋಜನೆಯಲ್ಲಿ ಕೊರೆಸಲಾಗಿದೆ. ವರ್ಷ, ಅಂದಾಜು ವೆಚ್ಚದ ವಿವರವನ್ನು ರೆಕಾರ್ಡ್ ಮಾಡಬೇಕು. ಬರಗಾಲ ಇರುವುದರಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.25 ಲಕ್ಷಗಳನ್ನು ಕೊಳವೆಬಾವಿ ಆಳ ಹೆಚ್ಚಿಸಲು, ಪ್ಲೆಶಿಂಗ್, ಪೈಪ್ಲೈನ್ ಅಳವಡಿಕೆಗಾಗಿ ಮಂಜೂರು ಮಾಡಲಾಗಿದೆ. ಇದಲ್ಲದೇ ವಿಪತ್ತು ನಿರ್ವಹಣಾ ಘಟಕದಿಂದಲೂ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಅಧಿಕಾರಿಗಳು ಸಮಯೋಚಿತವಾಗಿ ಕೆಲಸ ಮಾಡಬೇಕೆಂದರು.