ಹಗರಣ ಮುಚ್ಚಿಕೊಳ್ಳಲು ಸುಳ್ಳು ಆಫರ್ಗಳ ಕತೆ ಸೃಷ್ಟಿ: ಡಾ. ಇಂದ್ರೇಶ್
Nov 21 2024, 01:05 AM ISTಶಾಸಕ ರವಿಕುಮಾರ್ ಈಗ ‘ಆಫರ್’ ರವಿಕುಮಾರ್ ಆಗಿದ್ದಾರೆ. ಹಿಂದೆ ಬಿಜೆಪಿಯವರು ಸರ್ಕಾರ ಉರುಳಿಸಲು ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ರು. ಆಫರ್ ನೀಡಿರುವುದಾಗಿ ಹೇಳಿದ್ದರು. ಆದರೆ, ಈಗ ೧೦೦ ಕೋಟಿ ಆಫರ್ ನೀಡಿದ್ದಾರೆ ಎನ್ನುತ್ತಿದ್ದಾರೆ. ಈ ಆಫರ್ ಕೊಟ್ಟವರು ಯಾರು, ಯಾರು ಯಾರನ್ನು ಯಾವಾಗ ಎಲ್ಲಿ ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ತಾಕತ್ತಿದ್ದರೆ ಆಡಿಯೋ, ವಿಡಿಯೋ ಸೇರಿದಂತೆ ಏನೆಲ್ಲಾ ದಾಖಲೆಗಳಿವೆಯೋ ಎಲ್ಲವನ್ನೂ ರಿಲೀಸ್ ಮಾಡಲಿ.