ಅತೀ ಆಸೆಯಿಂದ ಎಎಸ್‌ಒ ಹೆಸರಿನ ಮೊಬೈಲ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ಸಾವಿರಕ್ಕೂ ಹೆಚ್ಚು ಜನರು ಸುಮಾರು 10 ಕೋಟಿಗೂ ಹೆಚ್ಚಿನ ಹಣ ಕಳೆದುಕೊಂಡಿರುವ ಅನ್‌ಲೈನ್ ದೋಖಾ ಪ್ರಕರಣ ಹೊಸದುರ್ಗದಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಜನರು ಕಂಗಾಲಗಿದ್ದಾರೆ.
ಸರ್ಕಾರವು 1 ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳಿಗೆ ಶಾಲೆಯ ಬಿಸಿಯೂಟದ ಜೊತೆ ಪ್ರತಿ ದಿನ ಒಂದೊಂದು ಮೊಟ್ಟೆ ನೀಡುವ ಯೋಜನೆ ಜಾರಿಗೆ ತಂದಿದೆ. ಆದರೆ, ಮೊಟ್ಟೆಗೆ ಸರ್ಕಾರ ನೀಡುತ್ತಿರುವ ಹಣಕ್ಕೂ ಮಾರು ಕಟ್ಟೆಯಲ್ಲಿ ಸಿಗುವ ಮೊಟ್ಟೆಗೆ ವ್ಯತ್ಯಾಸ ಬರುತ್ತಿದ್ದು ಶಾಲೆಗಳಿಗೆ ಸಮಸ್ಯೆ ಎದುರಾಗಿದೆ.