ಬಸ್ ನಿಲ್ದಾಣ ಪಕ್ಕದ ಜಾಗ ಹಿಂದೂ, ಮುಸ್ಲಿಂದಲ್ಲ, ಸರ್ಕಾರಿ ಜಾಗ
Jun 27 2025, 12:48 AM ISTಮುಖ್ಯ ಬಸ್ ನಿಲ್ದಾಣ ಪಕ್ಕದಲ್ಲಿರುವ ಪುರಸಭೆ ಮುಂಭಾಗದ ಸುಮಾರು 1.5 ಎಕರೆ ಪಾಳುಬಿದ್ದ ಜಾಗ ಪಟ್ಟಣದಲ್ಲಿನ ಹಿಂದೂ ಮತ್ತು ಮುಸ್ಲಿಮರಲ್ಲಿ ನಮ್ಮದು-ನಮ್ಮದು ಎಂಬ ವಿವಾದ 60 ವರ್ಷಗಳಿಂದಲೂ ಇದೆ. ಇದು ಈ ಎರಡು ಧರ್ಮದವರದೂ ಅಲ್ಲ, ಸರ್ಕಾರಿ ಜಾಗ ಎಂದು ಪುರಸಭೆಯಿಂದ ಹಿಡಿದು ವಿಭಾಗೀಯ ಅಧಿಕಾರಿಗಳ ಕಚೇರಿಯಲ್ಲಿಯೂ ದಾಖಲಾಗಿದೆ. ಈ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಅಭಿವೃದ್ಧಿ ಕೆಲಸಗಳನ್ನು ನಡೆಸಲಿ ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಗೌ.ಹಾಲೇಶ್ ಹೇಳಿದ್ದಾರೆ.