ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಈಗ 80 ಪರ್ಸೆಂಟ್ ಭ್ರಷ್ಟಾಚಾರ ನಡೆಸಿ ದೇಶದಲ್ಲೇ ನಂ.1 ಭ್ರಷ್ಟಾಚಾರದ ಸರ್ಕಾರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.
ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ ಎಂದು ಅಮೆರಿಕ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ.
ಖಾಸಗಿ ಶಾಲೆಗಳು 2025-26ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದು, ಬಹಳಷ್ಟು ಅನುದಾನರಹಿತ ಶಾಲೆಗಳು ಶೇಕಡ 15ರಿಂದ 20ರಷ್ಟು ಪ್ರವೇಶ ಶುಲ್ಕ ಹೆಚ್ಚಿಸಿವೆ. ಇದರಿಂದ ಪೋಷಕರಿಗೆ ಕಳೆದಬಾರಿಗಿಂತ ಹೆಚ್ಚಿನ ಶುಲ್ಕದ ಹೊರೆಬಿದ್ದಿದೆ.
ಅರಸು ಅಂತಾರೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಗಣೇಶ್, ‘ರವಿಶಂಕರ್ ಮೂಲಕ ನನಗೆ ಬಂದ ಈ ಆಫರ್ ಬಗ್ಗೆ ಹಿಂದೆಲ್ಲೂ ಹೇಳಿಲ್ಲ
ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ಸೂಪರ್ಹೀರೋ
ಅಟ್ಲಿ ನಿರ್ದೇಶನದಲ್ಲಿ ಸೈಫೈ ಆ್ಯಕ್ಷನ್ ಥ್ರಿಲ್ಲರ್
ಇದೇ ಡಿಸೆಂಬರ್ ಒಳಗಾಗಿ ಮುಖ್ಯಮಂತ್ರಿ ಕುರ್ಚಿ ಖಾಲಿಯಾಗದಿದ್ದರೆ ನನ್ನ ಬಂದು ಕೇಳಿ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮುಖ್ಯಮಂತ್ರಿ ಬದಲಾವಣೆಯ ತಮ್ಮ ಹೇಳಿಕೆ ಪುನಾ ಸಮರ್ಥಿಸಿಕೊಂಡಿದ್ದಾರೆ.
ಹಿಂದುಳಿದ ಪ್ರದೇಶಗಳತ್ತ ಕಾರ್ಯತಂತ್ರದ ಬದಲಾವಣೆಗೆ ಪುರಾವೆ । ಯೋಜನೆಯಿಂದ ಮಹಿಳೆಯರಿಗೆ ಹೆಚ್ಚು ಪ್ರಯೋಜನ
ಆರ್ಥಿಕತೆ ಮರು ರೂಪಿಸುತ್ತಿರುವ ಮುದ್ರಾ ಯೋಜನೆ
ಭಾರತವು ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ, ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ. ಬಿಜೆಪಿ ಆಡಳಿತವನ್ನು ನಡೆಸದೇ, ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ₹500 ಮುಖಬೆಲೆಯ ನಕಲಿಯಂತೆ ಕಾಣುವ ನೋಟುಗಳ ಕಂತೆ ಪತ್ತೆಯಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಬಸ್ ದರವೂ ಏರಿಕೆಯಾಗಲಿದೆ ಎಂಬ ಆತಂಕದಲ್ಲಿದ್ದ ಜನತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿ ಸುದ್ದಿ ನೀಡಿದ್ದಾರೆ. ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.