‘ಪ್ರತಿಯೊಂದು ಹೆಣ್ಣಿಗೂ ಯಾವಾಗ ಹೆರಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು, ತನ್ನ ಬದುಕು ಹೇಗಿರಬೇಕು ಅನ್ನೋದನ್ನು ನಿರ್ಧರಿಸುವ ಅಧಿಕಾರ ಇದೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದಯಮಾಡಿ ಟ್ರೋಲ್ ಮಾಡೋದನ್ನು ನಿಲ್ಲಿಸಿ’.
ನಿರ್ದೇಶಕ ಎ ಎಂ ಆರ್ ರಮೇಶ್ ಪುತ್ರಿ ವಿಜೇತ ವಸಿಷ್ಠ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದಾರೆ. ತಮಿಳು ಚಿತ್ರದಲ್ಲಿ ನಟಿಸುತ್ತಿರುವ ವಿಜೇತ ಮಾತುಗಳು ಇಲ್ಲಿವೆ.
ಬಾಜ್ಬಾಲ್’ ಹೆಸರಿನಲ್ಲಿ ಆಕ್ರಮಣಕಾರಿ ಆಟವಾಡುವುದಕ್ಕೆ ಪ್ರಸಿದ್ಧಿಯಾಗಿರುವ ಇಂಗ್ಲೆಂಡ್ ಈ ಬಾರಿ ಟೆಸ್ಟ್ ಕ್ರಿಕೆಟ್ನ ನೈಜ ಆಟಕ್ಕೆ ಮರಳಿತು. ಲಾರ್ಡ್ಸ್ ಕ್ರೀಡಾಂಗಣದ ಪಿಚ್ನಲ್ಲಿ ಕಂಡುಬಂದ ಅನಿರೀಕ್ಷಿತ ಬೌನ್ಸ್, ಸ್ವಿಂಗ್ಗಳ ಮುಂದೆ ಆತಿಥೇಯರು ರನ್ ಗಳಿಸಲು ಬಹಳಷ್ಟು ಶ್ರಮವಹಿಸಬೇಕಾಯಿತು
ಟಿ.ನಾಸೀರ್ಗೆ ಮೊಬೈಲ್ ಪೂರೈಕೆ ಪ್ರಕರಣ ಸಂಬಂಧ ಬಂಧಿತ ಮೂವರು ಶಂಕಿತ ಉಗ್ರರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂದುವರೆಸಿದೆ. ಉಗ್ರ ನಾಸೀರ್ ಜೈಲಲ್ಲಿದ್ದುಕೊಂಡೇ ಯಾರ ಜತೆಗೆ ಮೊಬೈಲ್ನಲ್ಲಿ ಮೂಲಕ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಕಲೆಹಾಕಲು ಯತ್ನಿಸುತ್ನಿದೆ.
ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜಿಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ 2,500 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಯೋಜನೆಗೆ ಗುತ್ತಿಗೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳಕ್ಕೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆ ನಿರ್ಧರಿಸಿದೆ.
‘ಹಾಸನದಲ್ಲಿನ ಕಳೆದೆರಡು ತಿಂಗಳಲ್ಲಿ ಉಂಟಾಗಿರುವ 20 ಹೃದಯಾಘಾತದ ಸಾವುಗಳಲ್ಲಿ ಶೇ.75 ರಷ್ಟು ಮಂದಿ ಸಾವಿಗೆ ಜೀವನಶೈಲಿ ಹಾಗೂ ಅನಾರೋಗ್ಯದ ಹಿನ್ನೆಲೆ ಕಾರಣ
‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎನ್ನುವವರ ನಡುವೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವ ನಿಷ್ಠಾವಂತ ಓದುಗರೊಬ್ಬರ ಪತ್ರಿಕೆ ಸಂಗ್ರಹದ ಅಪಾರ ಪ್ರೀತಿಯ ಕಥನವಿದು. ಬಂಟ್ವಾಳ ತಾಲೂಕಿನ 88ರ ಹರೆಯದ ಈ ಕೃಷಿಕರು ಕಳೆದ 55 ವರ್ಷಗಳಿಂದ ‘ಕನ್ನಡಪ್ರಭ’ದ ನಿರಂತರ ಓದುಗ ಹಾಗೂ ಸಂಗ್ರಹಕಾರ ಎಂಬುದು ವಿಶೇಷ.
ಕರ್ನಾಟಕದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು, ವಿಶ್ವದಲ್ಲಿ ಪರಿಣಿತ ಟೆಕ್ಕಿಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದೆ. ಭಾರತದ ಒಟ್ಟು 6 ನಗರಗಳು ಈ ಪಟ್ಟಿಯಲ್ಲಿರುವುದು ವಿಶೇಷ.