46 ಹಿಂದೂ ಜಾತಿಗಳ ಜತೆ ಕ್ರಿಶ್ಚಿಯನ್ ಸೇರಿಸಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ 33 ಕ್ರಿಶ್ಚಿಯನ್ ಜತೆಗಿನ ಹಿಂದೂ ಜಾತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ಸೆ.22ರಂದು ದಸರಾ ಶುರು. ಒಂದೆಡೆ ಬಣ್ಣದ ದಿರಿಸುಗಳ ಸಂಭ್ರಮ ನಡೆದರೆ ಇನ್ನೊಂದೆಡೆ ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸದ ಗೌಜಿ ನಡೆಯುತ್ತಿರುತ್ತದೆ. ಈ ವೇಳೆಯಲ್ಲಿ ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.
ಮಕ್ಕಳಾಗಿದ್ದಾಗ, ‘ದೊಡ್ಡೋನಾದ್ಮೇಲೆ ಏನ್ ಮಾಡ್ತಿ?’ ಅಂತ ಪ್ರಶ್ನೆ. ದೊಡ್ಡವರಾದ ಮೇಲೆ, ‘ಆ ಕಾಲವೊಂದಿತ್ತು’ ಅಂತ ಬಾಲ್ಯದ ಕನವರಿಕೆ. ಅಂಥಾದ್ದೊಂದು ಕನವರಿಕೆಯಲ್ಲಿ ಹುಟ್ಟಿದ್ದೇ ಕಿಡಾಲ್ಟ್ ಟಾಯ್ ಸ್ಟೋರೀಸ್ ಟ್ರೆಂಡ್. ಇದು ದೊಡ್ಡವರ ಮಗು ಮನಸ್ಸಿನ ಆಟದ ಬಯಲು.
ಏಷ್ಯಾಕಪ್ ಸೂಪರ್-4ನಲ್ಲಿ ಮಹತ್ವದ ಪಂದ್ಯ: ಭಾರತವೇ ಗೆಲ್ಲುವ ಫೇವರಿಟ್ । ಮೊದಲ ಪಂದ್ಯದ ಹೈಡ್ರಾಮ ಮುಂದುವರಿಕೆ?ಆಟಗಾರರ ನೋ ಶೇಕ್ಹ್ಯಾಂಡ್ ಖಚಿತ । ಸೂರ್ಯ ಪಡೆಗೆ 2ನೇ ಗೆಲವಿನ ತವಕ । ಪಾಕ್ಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸ
ಎಚ್1-ಬಿ ವೀಸಾ ದರ ಏರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ತಕ್ಷಣಕ್ಕೆ ಭಾರತೀಯ ಕಂಪನಿಗಳಿಗೆ ಹೊರೆ ಎಂದು ಎನ್ನಿಸಿದರು, ಮುಂದಿನ ದಿನಗಳಲ್ಲಿ ಅವು ಬೆಂಗಳೂರು ಸೇರಿದಂತೆ ಭಾರತದ ಹಲವು ಐಟಿ ಸಿಟಿಗಳಿಗೆ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ನೇಪಾಳದಲ್ಲಾದ ದಂಗೆ ಭಾರತದಲ್ಲೂ ನಡೆಯಬೇಕು ಎಂಬ ವಿಕೃತ ಹಂಬಲ ಕಾಂಗ್ರೆಸ್ ಹೇಳಿಕೆಗಳಲ್ಲಿ ಕಂಡುಬರುತ್ತಿದೆ. ಕಾಂಗ್ರೆಸ್ನ ಬೀದಿ ಹೋರಾಟದ ಆಶಯವೇನಾದರೂ ಯಶಸ್ವಿಯಾದರೆ, ಭಾರತ ಸಂಪಾದಿಸಿದ ಜಾಗತಿಕ ವರ್ಚಸ್ಸು, ಯುವಪೀಳಿಗೆಯ ಉಜ್ವಲವಾದ ಭವಿಷ್ಯ ಮತ್ತು ನಾಗರಿಕರ ನೆಮ್ಮದಿಯ ಬದುಕು ನೆಲಸಮವಾಗುತ್ತವೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿರುವುದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ
ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಕರೆ ನೀಡಿದೆ.
ಪ್ರಕರಣಗಳನ್ನು ಮತ್ತೊಂದು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ಟಾರ್ಗೆಟ್ ಅಲ್ಲ, ಅವರದೇನಿದ್ದರೂ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ಮಾನಸಿಕತೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಆರೋಪಿಸಿದ್ದಾರೆ.