ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದ್ದ ಆಕ್ಸಿಯೋಂ-4 ಮಿಷನ್ನ ರಾಕೆಟ್ನಲ್ಲಿದ್ದ ದೋಷವನ್ನು ಪತ್ತೆ ಹಚ್ಚುವ ಮೂಲಕ ಇಸ್ರೋ ವಿಜ್ಞಾನಿಗಳು ಬಹುದೊಡ್ಡ ದುರಂತವೊಂದನ್ನು ತಪ್ಪಿಸಿದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಪತನಗೊಂಡ ಏರ್ ಇಂಡಿಯಾದ 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ಬದುಕುಳಿದ ಬಳಿಕ ವಿಮಾನಯಾನ ಕ್ಷೇತ್ರದಲ್ಲಿ 11ಎ ಮತ್ತು ತುರ್ತು ದ್ವಾರದ ಬಳಿಯ ಸೀಟುಗಳಿಗೆ ಭಾರಿ ಬೇಡಿಕೆ ಒದಗಿಬಂದಿದೆ.
ಯಾವುದೇ ಸಾಧಕರ ಸಾವು ಅವರ ಅಂತ್ಯವಲ್ಲ. ಅವರ ಸಾವಿನಂತರವೂ ಅವರ ಸಾಧನೆ ಅವರನ್ನು ಜೀವಂತವಾಗಿರಿಸುತ್ತದೆ. ಅದೇ ರೀತಿಯ ಸಾಧಕ ಎಸ್.ಎಲ್. ಭೈರಪ್ಪ ಅವರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಮಾವು ಮೇಳದಿಂದ ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗುವ ಜತೆಗೆ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ತಾಜಾ ಮಾವಿನ ಹಣ್ಣು ಲಭ್ಯವಾಗಲಿವೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್. ಪುರದ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಕಾರಾಗೃಹದ ಕೈದಿಗಳಿಗೆ ಮೊಬೈಲ್ ಪೂರೈಸಲು ಯತ್ನಿಸಿದ ಆರೋಪದ ಮೇರೆಗೆ ಕಾರಾಗೃಹದ ಇಬ್ಬರು ಹೊರಗುತ್ತಿಗೆ ಮನಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಮೂಲಕ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪ ಸಂಬಂಧ ಪತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
5 ವರ್ಷದ ಬಳಿಕ ಕೆಂಪೇಗೌಡ ಜಯಂತಿ - ಬಿಬಿಎಂಪಿ ಅಧಿಕಾರಿಗಳಿಂದ ಸಕಲ ಸಿದ್ಧತೆ । ಜೂ.27ಕ್ಕೆ ಟೌನ್ಹಾಲ್ನಲ್ಲಿ ಅದ್ಧೂರಿ ಸಮಾರಂಭ । ಕೆಂಪೇಗೌಡ ಪ್ರಶಸ್ತಿ ಪ್ರದಾನದ ಬಗ್ಗೆ ಸ್ಪಷ್ಟತೆ ಇಲ್ಲ
ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿದ್ದ ನಟ ಕೋಮಲ್ ಅವರ ಮೊಬೈಲ್ ಅನ್ನು ಕೆಲವೇ ತಾಸಿನೊಳಗೆ ಪತ್ತೆ ಹಚ್ಚಿ ಮಲ್ಲೇಶ್ವರ ಠಾಣೆ ಪೊಲೀಸರು ಮರಳಿ ಕೊಟ್ಟಿದ್ದಾರೆ.
ಶನಿವಾರ ಕೇವಲ 2 ಗಂಟೆ ಸುರಿದ ಮುಸಲಧಾರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತತ್ತರಿಸಿದ್ದು, ಮಂಗಳೂರು ನಗರದ ರಸ್ತೆಗಳಂತೂ ಅಕ್ಷರಶಃ ಮುಳುಗಿಹೋಗಿದ್ದವು.