ಬೆಂಗಳೂರು ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ ಗೋಲ್ಮಾಲ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದೀಗ ಆ ವಿಚಾರವನ್ನು ಇಟ್ಟುಕೊಂಡು ಚುನಾವಣಾ ಆಯೋಗದ ವಿರುದ್ಧ ಸಮರ ಮುಂದುವರಿಸಿದ್ದಾರೆ. ಇದಕ್ಕೆ ಆಯೋಗ ಕೂಡ ತಿರುಗೇಟು ಕೊಟ್ಟಿದೆ.
ಅರಸಿಕರಾದ ಜನದ ಮುಂದೆ ಕಾವ್ಯ ಓದುವ ಹಣೆಬರಹ ಬರೆಯಬೇಡ ಅಂತ ಕವಿಯೊಬ್ಬ ವಿಧಿಯ ಹತ್ತಿರ ಕೇಳಿಕೊಂಡಿದ್ದನಂತೆ. ಕೇಳುಗರು ಕೂಡ ಕೆಟ್ಟ ಕವಿತೆಯನ್ನು ಯಾವತ್ತೂ ಕೇಳಿಸಬೇಡ ಅಂತ ಪ್ರಾರ್ಥಿಸಬಹುದು. ಆದರೆ ಕೆಟ್ಟ ಕಾವ್ಯಕ್ಕೆ ಕೊನೆಯಿಲ್ಲ. ಅನೇಕ ಸಲ ಎಲ್ಲರೂ ಕೆಟ್ಟ ಕವಿತೆಗೆ ಕಿವಿಯೊಡ್ಡಲೇ ಬೇಕು.
ಮಕ್ಕಳ ರಂಗಭೂಮಿ ಅಂದಾಗ ನೆನೆಸಿಕೊಳ್ಳಲೇಬೇಕಾದ ಹೆಸರು ಪ್ರೇಮಾ ಕಾರಂತರದ್ದು. ಇವರು ಹುಟ್ಟಿದ್ದು ಆಗಸ್ಟ್ 15ಕ್ಕೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, 1936ರಲ್ಲಿ. ಅನೇಕ ಸಿನಿಮಾಗಳಿಗೆ, ನಾಟಕಗಳಿಗೆ ವಸ್ತ್ರ ವಿನ್ಯಾಸ, ನಿರ್ದೇಶನ ಮಾಡಿದವರು.
ಜಪಾನಿನ ದಶಕಗಳ ಹಿಂದಿನ ಪದ್ಧತಿಯೊಂದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಅದು ಜೊಹಾಟ್ಸು. ಈ ಪದದ ಅರ್ಥ ಆವಿಯಾಗುವಿಕೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ವ್ಯಕ್ತಿಯೇ ಮಂಗಮಾಯವಾಗುವ ಕಥೆ ಇದು.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಾಟ್ ಜಿಪಿಟಿಯಲ್ಲಿ ಡಾ। ಜಿ.ಪರಮೇಶ್ವರ್ ದೇಶದ ನಂಬರ್ ಒನ್ ಗೃಹ ಸಚಿವರಂತೆ! ಸಾಮಾಜಿಕ ಜಾಲತಾಣದಲ್ಲಿ ‘ಗೊತ್ತಿಲ್ಲ ಪರಮೇಶ್ವರ್’ ಟ್ರೋಲ್ಗೆ ಖುದ್ದು ಪರಮೇಶ್ವರ್ ಮೇಲಿನಂತೆ ಉತ್ತರಿಸಿದರು.
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? । ಸಿದ್ದುಗೆ ಫೋನ್ ಮಾಡಿ ರಾಹುಲ್ ಹೇಳಿದ್ದೇನು?
ದಸರಾದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆಗಳಿಗೆ ಒಟ್ಟು 630ಕ್ಕೂ ಹೆಚ್ಚು ಟನ್ ಆಹಾರ ನೀಡಲಾಗುತ್ತದೆ!
ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನು ಹೂಳಿರುವುದಾಗಿ ಹೇಳಿಕೆ ನೀಡಿರುವುದು, ಈ ಸಂಬಂಧ ಎಸ್ಐಟಿ ಉತ್ಖನನ ನಡೆಸುತ್ತಿರುವ ಬೆನ್ನಲ್ಲೇ ಶ್ರೀ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ.
ಹಳದಿ ಮಾರ್ಗ ಆರಂಭವಾದ ಬಳಿಕ 10 ಲಕ್ಷದ ಆಸುಪಾಸಿನಲ್ಲೇ ಇದ್ದ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಸ್ವಾತಂತ್ರ್ಯದಿನಾಚರಣೆಯ ದಿನ 8.80 ಲಕ್ಷಕ್ಕೆ ಇಳಿಯುವ ಮೂಲಕ ಅಚ್ಚರಿಗೆ ಕಾರಣವಾಗಿದೆ.