2025-26ನೇ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರು.ಗೂ ಹೆಚ್ಚು. ಬಜೆಟ್ನಲ್ಲಿ ಎಲ್ಲ ಅಲ್ಪಸಂಖ್ಯಾತರಿಗೆ ಕೇವಲ 4,500 ಕೋಟಿ ರು. (ಶೇ.1) ಅನುದಾನ ನೀಡಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನು ಪರಿಸರ ಸ್ನೇಹಿ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ 2025-26ನೇ ಸಾಲಿನಲ್ಲಿ 14,750 ಎಲೆಕ್ಟ್ರಿಕ್ ಬಸ್ಗಳ ಸೇರ್ಪಡೆ ಮಾಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ ಬಜೆಟ್ನಲ್ಲಿ ಒಟ್ಟಾರೆ 7145 ಕೋಟಿ ರು. ಮೀಸಲಿಡಲಾಗಿದೆ.
ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರು. ತಲುಪಿದ್ದು ಈ ಪೈಕಿ ರಾಜ್ಯ ತೆರಿಗೆ ಆದಾಯದಿಂದ 2.08 ಲಕ್ಷ ಕೋಟಿ ರು. ಬರಲಿದೆ. ಉಳಿದ ಮೊತ್ತವನ್ನು ಕೇಂದ್ರದ ತೆರಿಗೆ ಪಾಲು, ಸಹಾಯ ಅನುದಾನ ಹಾಗೂ ಸಾಲದ ರೂಪದಲ್ಲಿ ನಿರೀಕ್ಷಿಸಲಾಗಿದೆ.
ದೇಶೀಯ ತಳಿಗಳ ರಕ್ಷಣೆಗೆ 2 ಕೋಟಿ ರು. ಅನುದಾನ, ಜಾನುವಾರುಗಳ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ಮೊತ್ತ ಹೆಚ್ಚಳ, 50 ನೂತನ ಪಶು ಚಿಕಿತ್ಸಾಲಯ ಸ್ಥಾಪನೆ, ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಹೈಟೆಕ್ ಮತ್ಸ್ಯದರ್ಶಿನಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ನಲ್ಲಿ ಈ ಬಾರಿ 51,034 ಕೋಟಿ ರು. ಒದಗಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 966 ಕೋಟಿ ರು. ಕಡಿತ ಮಾಡಲಾಗಿದೆ
ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲು ಒಂದೂವರೆ ವರ್ಷದಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಸಹಾಯಧನ ಸ್ಥಗಿತ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಬಡವರ ಮನೆಗಳ ಸಾಲದ ಮೇಲಿನ ಬಡ್ಡಿ ಕಡಿತ, ಸರ್ಕಾರದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಡವರ ಮನೆಗಳ ನಿರ್ಮಾಣ, ಬೆಂಗಳೂರಿನಲ್ಲಿ ಕೆಎಚ್ಬಿಯ ಸೂರ್ಯ ನಗರ 4 ಹಂತದ ಯೋಜನೆಯಡಿ ನಿವೇಶನಗಳ ಹಂಚಿಕೆ ಸೇರಿದಂತೆ ವಸತಿ ಇಲಾಖೆಗೆ ಬಜೆಟ್ನಲ್ಲಿ ವಿಶೇಷ ಆದ್ಯತೆಗಳನ್ನು ನೀಡಲಾಗಿದೆ.
ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಸಿದ್ದು ಭರ್ಜರಿ ಸಹಕಾರ
- ಕಲಬುರಗಿಯಲ್ಲಿ ಮೆಗಾ ಡೈರಿ, ಕೊಪ್ಪಳದಲ್ಲಿ ಕುರಿ- ಮೇಕೆ ಮಾರುಕಟ್ಟೆ
- ತೊಗರಿಗೆ ₹450 ಪ್ರೋತ್ಸಾಹ ಧನ । ಹೈನುಗಾರಿಕೆಗೆ ₹10 ಕೋಟಿ
- ರಾಜ್ಯದ ಎಪಿಎಂಸಿಗಳಲ್ಲಿ ದುಡಿವ ಶ್ರಮಿಕರಿಗೆ ಇನ್ನು 5 ಲಕ್ಷ ರು. ವಿಮೆ