ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಮಾಗಡಿ ರಸ್ತೆಯ ಜಿ.ಟಿ. ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮ*ತ್ಯೆಗೆ ಸೋಮವಾರ ಶರಣಾಗಿದ್ದಾನೆ. ಪಾಪಯ್ಯ ಗಾರ್ಡನ್ ನಿವಾಸಿ ಸಾಗರ್‌ (34) ಮೃತ ದುರ್ದೈವಿ. ಮಾಲ್‌ನ ಮೂರನೇ ಮಹಡಿಗೆ ತೆರಳಿ ಜಿಗಿದು ಆತ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ 

ಬೆಂಗಳೂರು : ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಮಾಗಡಿ ರಸ್ತೆಯ ಜಿ.ಟಿ. ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮ*ತ್ಯೆಗೆ ಸೋಮವಾರ ಶರಣಾಗಿದ್ದಾನೆ.

ಪಾಪಯ್ಯ ಗಾರ್ಡನ್ ನಿವಾಸಿ ಸಾಗರ್‌ (34) ಮೃತ ದುರ್ದೈವಿ. ಮಾಲ್‌ನ ಮೂರನೇ ಮಹಡಿಗೆ ತೆರಳಿ ಜಿಗಿದು ಆತ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಜಿನಿಯರಿಂಗ್ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಸಾಗರ್‌, ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ. ಈ ಸಂಬಂಧ ಆತನು ಚಿಕಿತ್ಸೆ ಪಡೆದರೂ ಚೇತರಿಸಿಕೊಳ್ಳಲಿಲ್ಲ. ಇದೇ ಯಾತನೆಯಲ್ಲೇ ಆತ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಲ್‌ಗೆ ಬೆಳಗ್ಗೆ ಆಗಮಿಸಿದ ಸಾಗರ್‌ ಸೀದಾ ಮೂರನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾನೆ. ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.