ಮದುವೆಯ ಸಾಂಸ್ಕೃತಿಕ ಸ್ವರೂಪ ಬದಲು: ಲೇಖಕಿ ಎಂ.ಸಿ.ಲಲಿತಾಆಡಂಬರದ ವಿವಾಹಗಳ ಸುಳಿಗೆ ಸಿಲುಕಿ ಮದುವೆಯ ಸಾಂಸ್ಕೃತಿಕ ಸ್ವರೂಪಗಳೇ ಬದಲಾಗುತ್ತಿವೆ. ಸರಳ ವಿವಾಹಗಳು ಮೂಲೆಗುಂಪಾಗುತ್ತಿವೆ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷರಾದ ಎಂ.ಸಿ.ಲಲಿತಾ ಆತಂಕ ವ್ಯಕ್ತಪಡಿಸಿದರು. ತುಮಕೂರಿನಲ್ಲಿ ವರದಕ್ಷಿಣೆ ಪರಿಕಲ್ಪನೆ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.