ತುರುವೇಕೆರೆಯಲ್ಲಿ ತುಂತುರು ಮಳೆಗೆ ತತ್ತರಿಸಿ ಹೋದ ಜನರು, ವ್ಯಾಪಾರ ಅಸ್ತವ್ಯಸ್ಥ ಸೈಕ್ಲೋನ್ ಎಫೆಕ್ಟ್ಗೆ ತುರುವೇಕೆರೆ ತಾಲೂಕಿನ ಜನರು ತತ್ತರಿಸಿ ಹೋಗಿದ್ದು, ಕಳೆದ ಎರಡು ದಿನಗಳಿಂದಲೂ ಸೂರ್ಯನ ಕಿರಣ ಕಾಣದೇ ಮಲೆನಾಡಿನಂತೆ ಆಗಿದೆ. ಮಧ್ಯಾಹ್ನದ ವೇಳೆಯೂ ಸಾಯಂಕಾಲದಂತೆ ಗೋಚರಿಸುತ್ತಿತ್ತು. ಜೋರಾದ ಮಳೆ ಆಗದಿದ್ದರೂ ಸಹ ತುಂತುರು ಮಳೆಯಿಂದಾಗಿ ಜನರು ಹೊರಕ್ಕೆ ಬರಲು ಹಿಂದೇಟು ಹಾಕಿದರು.