ಅಂತಾರಾಷ್ಟ್ರೀಯ ವೈಜ್ಞಾನಿಕ ರಾಜತಾಂತ್ರಿಕತೆಯ ಮಹತ್ವಾಕಾಂಕ್ಷೆಯ ಹೊಸ ಅಧ್ಯಾಯದಲ್ಲಿ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಸಂಶೋಧಕರು COMBAT ಡೆಂಘೀ ಯೋಜನೆಯಡಿಯಲ್ಲಿ ಕೈಜೋಡಿಸಿದ್ದಾರೆ.
ಎರಡೂವರೆ ಗಂಟೆ ಸಿನಿಮಾವೊಂದು ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಥಿಯೇಟರ್ನಲ್ಲಿ ಕರೆಂಟ್ ಹೋದಾಗ ಪರಿಸ್ಥಿತಿ ಹೇಗಿರುತ್ತದೆಯೋ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ತೆಂಡುಲ್ಕರ್-ಆ್ಯಂಡರ್ಸನ್ ಸರಣಿಯ ಕಥೆಯೂ ಅದೇ ರೀತಿ ಆಗಿದೆ.
ಕರ್ನಾಟಕದ ಮಂಡ್ಯದಲ್ಲಿ ಒಬ್ಬ ವೈದ್ಯರು ಈ ಹಿಂದೆ 5 ರು. ವೈದ್ಯ ಎಂದು ಪ್ರಸಿದ್ಧರಾಗಿದ್ದರು. ಅದೇ ರೀತಿ ಕೇರಳದಲ್ಲಿ 2 ರು. ಡಾಕ್ಟರ್ ಎಂದೇ ಖ್ಯಾತರಾಗಿದ್ದ ಜನಸ್ನೇಹಿ ವೈದ್ಯ ಎ.ಕೆ. ರೈರು ಗೋಪಾಲ್ (80) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಜತೆ ವ್ಯಾಪಾರ ಮುಂದುವರಿಸಿದರೆ ದಂಡ ವಿಧಿಸುವುದಾಗಿ ಹಾಕಿರುವ ಬೆದರಿಕೆ ಹೊರತಾಗಿಯೂ, ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಬೆಂಗಳೂರಿನ ಐಟಿ ಕಾರಿಡಾರ್ ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ, ಚಾಲಕ ರಹಿತ ರೈಲು ಓಡಾಡಲಿರುವ ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಆ.10ರಂದು ನೆರವರಿಸಲಿದ್ದಾರೆ.