ನವದೆಹಲಿ: ಕಾರ್ಗಿಲ್ ವಿಜಯ ದಿನದ ನಿಮಿತ್ತ ಕಾರ್ಗಿಲ್ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿನ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.
ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರು. ಅವ್ಯವಹಾರ ನಡೆಸಿದ್ದು, ಈ ಹಣವನ್ನು 100ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ 27 ಮಂದಿ ಜೇಬಿಗಿಳಿಸಿಕೊಂಡಿರುವ ಮಹತ್ವದ ಸಂಗತಿ ಬಯಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಇಲ್ಲಿನ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಆಗಿದೆ. ಇದನ್ನು ತಪ್ಪಿಸಲು ಆಲಮಟ್ಟಿ ಜಲಾಶಯದಿಂದ ಹೆಚ್ಚು ನೀರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ.
: ದೇಶದ ರಾಷ್ಟ್ರಪತಿಗಳ ನಿವಾಸವಾದ ರಾಷ್ಟ್ರಪತಿ ಭವನದ ಕೆಲ ಸಭಾಂಗಣಗಳ ಹೆಸರನ್ನು ಬದಲಿಸಲಾಗಿದೆ. ವಿಧ್ಯುಕ್ತ ಕಾರ್ಯಕ್ರಮಗಳು ನಡೆಯುವ ದರ್ಬಾರ್ ಹಾಲ್ ಹಾಗೂ ಅಶೋಕ ಹಾಲ್ಗಳಿಗೆ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಗುರುವಾರ ಮರುನಾಮಕರಣ ಮಾಡಲಾಗಿದೆ.