ಸಿಂದೂರ ಖ್ಯಾತಿ, ಪಾಕ್ ತಜ್ಞಪರಾಗ್ ಜೈನ್ ರಾ ಮುಖ್ಯಸ್ಥಪಾಕಿಸ್ತಾನಕ್ಕೆ ಎಂದೂ ಮರೆಯದ ಪೆಟ್ಟನ್ನು ಕೊಟ್ಟ ಆಪರೇಷನ್ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ದೇಶದ ಬಾಹ್ಯ ಗುಪ್ತಚರ ಸಂಸ್ಥೆಯಾದ ‘ರಾ’ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ‘ರಾ’ ಮುಖ್ಯಸ್ಥರಾಗಿರುವ ರವಿ ಸಿನ್ಹಾ ಅವಧಿ ಜೂ.30ರಂದು ಅಂತ್ಯವಾಗಲಿದ್ದು, ಜು.1ರಂದು ಜೈನ್ ಅವರು 2 ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.