ಸಾರಾಂಶ
ಭಾರತದ ಮೇಲೆ ದಾಳಿ ನಡೆಸಿ 7 ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ರ ಆಪ್ತ ಸಲಹೆ
ಢಾಕಾ: ದೇಶದ ಜನರಿಗೆ ಸರಿಯಾಗಿ ತಿನ್ನಲು ಆಹಾರ ಕೊಡಲಾಗದ, ಭದ್ರತೆ ಒದಗಿಸಲಾಗದ ಸ್ಥಿತಿಯಲ್ಲಿರುವ ಬಾಂಗ್ಲಾದೇಶ, ಭಾರತದ ಮೇಲೆ ದಾಳಿ ನಡೆಸಿ 7 ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ರ ಆಪ್ತನೊಬ್ಬ ಪುಕ್ಕಟೆ ಸಲಹೆ ನೀಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ನಿವೃತ್ತ ಸೇನಾಧಿಕಾರಿ ಮೇ.ಜ.ಫಜ್ಲುರ್ ರೆಹಮಾನ್, ‘ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ, ಬಾಂಗ್ಲಾದೇಶವು ಭಾರತ ದೇಶದ ಏಳು ಈಶಾನ್ಯ ರಾಜ್ಯ ವಶಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಚೀನಾದ ಜೊತೆಗೆ ಜಂಟಿ ಮಿಲಿಟರಿ ವ್ಯವಸ್ಥೆಯ ಕುರಿತು ಮಾತುಕತೆಯನ್ನು ಪ್ರಾರಂಭಿಸುವುದು ಅಗತ್ಯ’ ಎಂದಿದ್ದಾರೆ.
ಈ ನಡುವೆ ರೆಹಮಾನ್ ಳಿಕೆಯಿಂದ ಬಾಂಗ್ಲಾದ ಮಧ್ಯಂತರ ಸರ್ಕಾರವು ಅಂತರವನ್ನು ಕಾಯ್ಡುಕೊಂಡಿದೆ. ‘ ಮಧ್ಯಂತರ ಸರ್ಕಾರ ಅವರ ಅಭಿಪ್ರಾಯವನ್ನು ಯಾವುದೇ ರೀತಿಯಲ್ಲಿಯೂ ಹಂಚಿಕೊಳ್ಳುವುದಿಲ್ಲ. ಅಂತಹ ಮಾತುಗಳನ್ನು ಪ್ರೋತ್ಸಾಹಿಸುವುದಿಲ್ಲ, ಬಾಂಗ್ಲಾ ದೇಶ ಎಲ್ಲ ರಾಷ್ಟ್ರಗಳ ಸಾರ್ವಬೌಮತ್ವ ಗೌರವಿಸುತ್ತದೆ’ ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಪಾಕ್‌ಗೆ 2 ಆರ್ಥಿಕ ಹೊಡೆತ ನೀಡಲು ಭಾರತ ಸಿದ್ಧತೆ
ಎಫ್‌ಎಟಿಎಫ್ ಗ್ರೇ ಲಿಸ್ಟ್‌ಗೆ ಪಾಕ್ ಸೇರ್ಪಡೆ । ಐಎಂಎಫ್‌ನ ಆರ್ಥಿಕ ನೆರವಿಗೆ ಕತ್ತರಿ ಕೋರಿಕೆ==
ನವದೆಹಲಿ: ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ ಭಾರತವು ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಕತ್ತರಿ ಹಾಕಲು 2 ಆರ್ಥಿಕ ಅಸ್ತ್ರಗಳ ಪ್ರಯೋಗಕ್ಕೆ ಚಿಂತನೆ ನಡೆಸಿದೆ.ಮೂಲಗಳ ಪ್ರಕಾರ, ಪಾಕಿಸ್ತಾನವನ್ನು ಮತ್ತೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್)ಯ ಗ್ರೇ ಲಿಸ್ಟ್‌ಗೆ ಸೇರಿಸುವಂತೆ ಭಾರತ ಒತ್ತಾಯ ಮಾಡಬಹುದು. ಜೊತೆಗೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ನೀಡಲಿರುವ ಧನಸಹಾಯಕ್ಕೆ ತಡೆ ಒಡ್ಡಬಹುದು.
ಎಫ್‌ಎಟಿಎಫ್‌ನ ಬೂದುಪಟ್ಟಿಗೆ ಸೇರವುದರಿಂದ ದೇಶವೊಂದರ ಮೇಲಿನ ಮೇಲ್ವಿಚಾರಣೆ ಹೆಚ್ಚುತ್ತದೆ. ಪರಿಣಾಮವಾಗಿ ವಿದೇಶಿ ಹೂಡಿಕೆ ಕಡಿಮೆಯಾಗಿ, ಜಾಗತಿಕ ಹಣಕಾಸು ಮಾರುಕಟ್ಟೆಗಳ ಪ್ರವೇಶಾವಕಾಶವೂ ವಿರಳವಾಗುತ್ತದೆ. 2018ರಲ್ಲಿ ಪಾಕಿಸ್ತಾನ ಇದೇ ಪಟ್ಟಿಯಲ್ಲಿತ್ತು. ಆದರೆ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವುದಾಗಿ ಗೋಗರೆದು, ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದವರ ವಿರುದ್ಧ ಕ್ರಮವನ್ನೂ ಕೈಗೊಂಡಿತ್ತು. ಇದರಿಂದ 2022ರ ಅಕ್ಟೋಬರ್‌ನಲ್ಲಿ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆಯಲಾಯಿತು. ಈಗ ಮತ್ತೆ ಪಾಕಿಸ್ತಾನದ ಜಾಗವನ್ನು ಗ್ರೇ ಲಿಸ್ಟ್‌ನಲ್ಲಿ ಕಾಯಂ ಮಾಡಲು ಭಾರತ ಎಫ್‌ಎಟಿಎಫ್‌ನ ಸದಸ್ಯರ ಬೆಂಬಲ ಪಡೆಯಬಹುದು.ಅತ್ತ ಐಎಂಎಫ್ ಪಾಕಿಸ್ತಾನಕ್ಕೆ ನೀಡಲಿದ್ದ 59 ಸಾವಿರ ಕೋಟಿ ರು. ಬಳಸಿಕೊಂಡು ಅದು ಉಗ್ರ ಚಟುವಟಿಕೆಗಳಿಗೆ ಬಳಸಬಹುದು ಎಂಬ ಕಳವಳ ವ್ಯಕ್ತಪಡಿಸಬಹುದು. ಈ ಮೂಲಕ ಪಾಕಿಸ್ತಾನಕ್ಕೆ ಸಿಗಲಿದ್ದ ಧನಸಹಾಯವನ್ನು ತಡೆಯಬಹುದು.
ಎಫ್‌ಎಟಿಎಫ್ ಗ್ರೇ ಲಿಸ್ಟ್‌ಗೆ ಪಾಕ್ ಸೇರ್ಪಡೆ । ಐಎಂಎಫ್‌ನ ಆರ್ಥಿಕ ನೆರವಿಗೆ ಕತ್ತರಿ ಕೋರಿಕೆ
ನವದೆಹಲಿ: ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ ಭಾರತವು ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಕತ್ತರಿ ಹಾಕಲು 2 ಆರ್ಥಿಕ ಅಸ್ತ್ರಗಳ ಪ್ರಯೋಗಕ್ಕೆ ಚಿಂತನೆ ನಡೆಸಿದೆ.ಮೂಲಗಳ ಪ್ರಕಾರ, ಪಾಕಿಸ್ತಾನವನ್ನು ಮತ್ತೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್)ಯ ಗ್ರೇ ಲಿಸ್ಟ್‌ಗೆ ಸೇರಿಸುವಂತೆ ಭಾರತ ಒತ್ತಾಯ ಮಾಡಬಹುದು. ಜೊತೆಗೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ನೀಡಲಿರುವ ಧನಸಹಾಯಕ್ಕೆ ತಡೆ ಒಡ್ಡಬಹುದು.
ಎಫ್‌ಎಟಿಎಫ್‌ನ ಬೂದುಪಟ್ಟಿಗೆ ಸೇರವುದರಿಂದ ದೇಶವೊಂದರ ಮೇಲಿನ ಮೇಲ್ವಿಚಾರಣೆ ಹೆಚ್ಚುತ್ತದೆ. ಪರಿಣಾಮವಾಗಿ ವಿದೇಶಿ ಹೂಡಿಕೆ ಕಡಿಮೆಯಾಗಿ, ಜಾಗತಿಕ ಹಣಕಾಸು ಮಾರುಕಟ್ಟೆಗಳ ಪ್ರವೇಶಾವಕಾಶವೂ ವಿರಳವಾಗುತ್ತದೆ. 2018ರಲ್ಲಿ ಪಾಕಿಸ್ತಾನ ಇದೇ ಪಟ್ಟಿಯಲ್ಲಿತ್ತು. ಆದರೆ ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವುದಾಗಿ ಗೋಗರೆದು, ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದವರ ವಿರುದ್ಧ ಕ್ರಮವನ್ನೂ ಕೈಗೊಂಡಿತ್ತು. ಇದರಿಂದ 2022ರ ಅಕ್ಟೋಬರ್‌ನಲ್ಲಿ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆಯಲಾಯಿತು.
ಈಗ ಮತ್ತೆ ಪಾಕಿಸ್ತಾನದ ಜಾಗವನ್ನು ಗ್ರೇ ಲಿಸ್ಟ್‌ನಲ್ಲಿ ಕಾಯಂ ಮಾಡಲು ಭಾರತ ಎಫ್‌ಎಟಿಎಫ್‌ನ ಸದಸ್ಯರ ಬೆಂಬಲ ಪಡೆಯಬಹುದು.ಅತ್ತ ಐಎಂಎಫ್ ಪಾಕಿಸ್ತಾನಕ್ಕೆ ನೀಡಲಿದ್ದ 59 ಸಾವಿರ ಕೋಟಿ ರು. ಬಳಸಿಕೊಂಡು ಅದು ಉಗ್ರ ಚಟುವಟಿಕೆಗಳಿಗೆ ಬಳಸಬಹುದು ಎಂಬ ಕಳವಳ ವ್ಯಕ್ತಪಡಿಸಬಹುದು. ಈ ಮೂಲಕ ಪಾಕಿಸ್ತಾನಕ್ಕೆ ಸಿಗಲಿದ್ದ ಧನಸಹಾಯವನ್ನು ತಡೆಯಬಹುದು.