ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೈಟಿಎಸ್ಎಸ್ ವಿದ್ಯಾರ್ಥಿಗಳ ಸಾಧನೆ

| Published : Nov 23 2025, 03:00 AM IST

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೈಟಿಎಸ್ಎಸ್ ವಿದ್ಯಾರ್ಥಿಗಳ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪ್ರಸಕ್ತ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಕಿರಿಯರ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಸಾನ್ವಿ ಹಗರಿ ಪ್ರಥಮ, ಚಿತ್ರಕಲೆ ಕುನಾಲ್ ಕುದಳೆ ಪ್ರಥಮ, ಧಾರ್ಮಿಕ ಪಠಣ (ಅರೆಬಿಕ್) ಆಫಿಯಾ ಶೇಖ್ ದ್ವಿತೀಯ, ಭಕ್ತಿಗೀತೆ ಆಶ್ವಿಕ್ ಅಂಬಿಗ ದ್ವಿತೀಯ, ಛದ್ಮವೇಷ ಲಹರಿ ಪಟಗಾರ ದ್ವಿತೀಯ, ಧಾರ್ಮಿಕ ಪಠಣ (ಸಂಸ್ಕೃತ) ಪ್ರಣವ್ ಹೆಗಡೆ ತೃತೀಯ; ಹಿರಿಯರ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಆರ್. ವೈಷ್ಣವಿ ಪ್ರಥಮ, ಕವನ ವಾಚನ ಸಾನಿಕಾ ನಾಯ್ಕ ಪ್ರಥಮ, ಮಿಮಿಕ್ರಿ ಧನುಶ್ ಹೆಗಡೆ ಪ್ರಥಮ, ಕನ್ನಡ ಕಂಠಪಾಠ ಶ್ವೇತಿಕಾ ನಾಯ್ಕ ದ್ವಿತೀಯ, ಧಾರ್ಮಿಕ ಪಠಣ (ಅರೆಬಿಕ್) ರೆಹಾನ್ ಖೊಂಡು ದ್ವಿತೀಯ, ಹಿಂದಿ ಕಂಠಪಾಠ ಸಾನಿಕಾ ನಾಯ್ಕ ತೃತೀಯ, ಕಥೆ ಹೇಳುವುದು ಶ್ವೇತಿಕಾ ನಾಯಕ ತೃತೀಯ, ಭಕ್ತಿಗೀತೆ ನೀರಜಾ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ವಿಭಾಗದ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ನಿಧಿ ಭಟ್ಟ ಪ್ರಥಮ, ಭರತನಾಟ್ಯ ಶ್ರೀನಿಧಿ ಮಲ್ಯ ಪ್ರಥಮ, ಪ್ರಬಂಧ ಅಪೇಕ್ಷಾ ಭಟ್ಟ ಪ್ರಥಮ, ಹಿಂದಿ ಭಾಷಣ ಫೈಝ್ ಖಲಂದರ್ ದ್ವಿತೀಯ, ಘಜಲ್ ಶಗುಪ್ತಾ ದರ್ಗಾ ದ್ವಿತೀಯ, ಕನ್ನಡ ಭಾಷನ ಶ್ರೀನಿಧಿ ಮಲ್ಯ ತೃತೀಯ, ಧಾರ್ಮಿಕ ಪಠಣ (ಅರೆಬಿಕ್) ಅಮಾನ್ ಟಿ.ಪಿ. ತೃತೀಯ, ಧಾಮಿಕ ಪಠಣ (ಸಂಸ್ಕೃತ) ಶ್ರಾವಣಿ ದಬ್ಲಿ ತೃತೀಯ, ಚಿತ್ರಕಲೆ ನೀರಜ್ ನಾಯ್ಕ ತೃತೀಯ, ಮಿಮಿಕ್ರಿ ಕುನಾಲ್ ಬಿಡಿಕರ್ ತೃತೀಯ, ಖವ್ವಾಲಿ ಪೈಝ್ ಖಲಂದರ್ ಮತ್ತು ಸಂಗಡಿಗರು ತೃತೀಯ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ. ಭಟ್ಟ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪ್ರಾಂಶುಪಾಲ ಆನಂದ ಹೆಗಡೆ, ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.