ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್‌ಗೆ ರೆಬೆಲ್ ಪ್ರಶಸ್ತಿ ಪ್ರದಾನ

| Published : Nov 25 2024, 01:06 AM IST

ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್‌ಗೆ ರೆಬೆಲ್ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬರೀಶ್ ಅವರು ಚಲನಚಿತ್ರ ನಟರಾಗಿ ಹಾಗೂ ರಾಜಕೀಯ ವ್ಯಕ್ತಿಯಾಗಿದ್ದರೂ ಅಜಾತಶತೃ ಆಗಿದ್ದರು. ವಿವಿಧ ದೇಶಗಳಲ್ಲೂ ಅಂಬರೀಶ್ ಅವರಿಗೆ ಆತ್ಮೀಯ ಸ್ನೇಹಿತರಿದ್ದರು. ಜೊತೆಗೆ ದೇಶದಲ್ಲಿ ಮಂಡ್ಯದ ಗಂಡು ಎಂಬ ಬಿರುದು ಪಡೆದುಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹಿರಿಯ ನಟ ದಿ.ಅಂಬರೀಶ್ ಪುಣ್ಯ ಸ್ಮರಣೆ ಅಂಗವಾಗಿ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದಿಂದ ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ರೆಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಟ್ಟಣದ ಹೊರವಲಯದ ಅಂಬಿ ಕ್ಯಾಂಟೀನ್ ಮುಂಭಾಗ ಅಭಿಮಾನಿಗಳ ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ನೇತೃತ್ವದಲ್ಲಿ ನಡೆದ ಅಂಬರೀಶ್ ಅವರ 6ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಅಂಬಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಟನ್, ಚಿಕನ್, ಮದ್ಯದ ಬಾಟಲ್ ಇಟ್ಟು ಜೈಕಾರ ಕೂಗಿ ಸ್ಮರಿಸಿಕೊಂಡರು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅಭಿಮಾನಿಗಳು ಕೆಲಕಾಲ ಅಂಬಿ ಹೆಸರಿನಲ್ಲಿ ಜೈಕಾರ ಕೂಗಿ, ನಮ್ಮ ಅಣ್ಣ ಅಂಬರೀಶ್ ಅಣ್ಣ ಎಂದು ನಮನ ಸಲ್ಲಿಸಿದರು.

ರಾಜ್ಯ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಅಂಬರೀಶ್ ಅವರು ಚಲನಚಿತ್ರ ನಟರಾಗಿ ಹಾಗೂ ರಾಜಕೀಯ ವ್ಯಕ್ತಿಯಾಗಿದ್ದರೂ ಅಜಾತಶತೃ ಆಗಿದ್ದರು. ವಿವಿಧ ದೇಶಗಳಲ್ಲೂ ಅಂಬರೀಶ್ ಅವರಿಗೆ ಆತ್ಮೀಯ ಸ್ನೇಹಿತರಿದ್ದರು. ಜೊತೆಗೆ ದೇಶದಲ್ಲಿ ಮಂಡ್ಯದ ಗಂಡು ಎಂಬ ಬಿರುದು ಪಡೆದುಕೊಂಡಿದ್ದರು ಎಂದರು.

ಸಂಘದ ಅಧ್ಯಕ್ಷ ಹರಳಹಳ್ಳಿ ಅಂಬಿ ಸುಬ್ಬಣ್ಣ ಮಾತನಾಡಿ, ದಿ.ಅಂಬರೀಶ್ ಅವರು ನನಗೆ ದೇವರು ಸಮಾನರಾಗಿದ್ದರು. ಅಂಬಿ ಅವರ ಸಾವು ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಾಗೂ ಅಂಬರೀಶ್ ಅಭಿಮಾನಿ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ರೆಬೆಲ್ ಬಿರುದು ಕೊಟ್ಟು ಗೌರವಿಸಿದರು.

ಸಮಾರಂಭದಲ್ಲಿ ಅಂಬರೀಶ್ ಅಭಿಮಾನಿಗಳಾದ ಎಲೆಕೆರೆ ಈರೇಗೌಡ, ರೈಟರ್ ಸ್ವಾಮೀಗೌಡ, ಗ್ಯಾಸ್ ತಮ್ಮಣ್ಣ, ಮೋಹನ್ ಸಿಂಗ್, ತಾಲೂಕು ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿಷೇಕ್ ಸುಬ್ಬಣ್ಣ, ಕೆನ್ನಾಳು ಲಿಂಗರಾಜು, ಹರಳಹಳ್ಳಿ ಮಂಜು, ಪರಶಿವ, ಮಂಡ್ಯದ ಬ್ಯಾಂಕ್ ಮಿತ್ರ ಮೋಹನ್ ಸೇರಿದಂತೆ ಹಲವರು ಇದ್ದರು.