ಕೆಂಡದಂಥ ಬಿಸಿಲಿನಲ್ಲೂ ಪ್ರಚಂಡ ಮತದಾನಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕುಗೊಂಡಿತ್ತು. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣರಲ್ಲಿ ಹಕ್ಕು ಚಲಾಯಿಸುವ ಉತ್ಸಾಹ ಹೆಚ್ಚಾಗಿತ್ತು. ಪ್ರಖರ ಬಿಸಿಲು ಲೆಕ್ಕಿಸದೆ ವೃದ್ಧರು, ಮಹಿಳೆಯರು, ಅಂಗವಿಕಲರು ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡರು.