ನಿಪ್ಪಾಣಿ ಕ್ಷೇತ್ರದ ಮಾಜಿ ಶಾಸಕ ಕಾಕಾಸಾಹೇಬ್ ಇನ್ನಿಲ್ಲನಿಪ್ಪಾಣಿ ಕ್ಷೇತ್ರದ ಮಾಜಿ ಶಾಸಕ, ಕ್ಷೇತ್ರದ ಹಸಿರು ಕ್ರಾಂತಿಯ ಶಿಲ್ಪಿ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ (70) ಅನಾರೋಗ್ಯ ನಿಮಿತ್ತ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಅಸುನೀಗಿದರು. ಮೃತರು ಪುತ್ರ ಸುಜಯ್, ಸೊಸೆ ಉಮಾ, ಮೊಮ್ಮಗ, ಮೊಮ್ಮಗಳು, ಮಗಳು ಸುಪ್ರಿಯಾ, ಅಳಿಯ ದತ್ತಕುಮಾರ್, ಇಬ್ಬರು ಸಹೋದರರು, ಸೋದರ ಮಾವ, ಮೂವರು ಸಹೋದರಿಯರು ಇದ್ದಾರೆ.