ಕೋ.ಶಿವಾಪೂರದಲ್ಲಿ ಹೊಸಬಟ್ಟೆ ತೊಟ್ಟು ಕಾಮದಹನಯರಗಟ್ಟಿ: ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಮಂಗಳವಾರ ಜನರು ಹೊಸ ಬಟ್ಟೆಗಳನ್ನು ತೊಟ್ಟು ಕಾಮದಹನ ಮಾಡಲಾಯಿತು. ಗ್ರಾಮದಲ್ಲಿ ಹಿಂದಿನ ದಿನ ರಾತ್ರಿ ಪ್ರತಿ ಓಣಿಗಳಲ್ಲಿ ಕಾಮಣ್ಣನನ್ನು ಹೊತ್ತುಕೊಂಡು ಯುವಕರು, ಮಕ್ಕಳು, ಹಿರಿಯರು ಸೇರಿ ಪ್ರತಿ ಮನೆಮನೆಗೆ ಭೇಟಿ ನೀಡುತ್ತಾರೆ. ಅಲ್ಲದೇ, ಈ ಮುಖಾಂತರ ಮನೆಯಲ್ಲಿನ ಮಹಿಳೆಯ ಸಕ್ಕರೆ ಹೋಳಿಗೆ ನೈವೇದ್ಯನೀಡಿ ದರ್ಶನ ಪಡೆದುಕೊಳ್ಳುತ್ತಾರೆ.