ಶಿವಾಜಿ ಪುತ್ಥಳಿಯ ಅಕ್ಕಪಕ್ಕದ ಅವ್ಯವಸ್ಥೆ ಸರಿಪಡಿಸಿ ಸವದತ್ತಿ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಉದ್ದೇಶಪೂರ್ವಕವಾಗಿ ಪುತ್ಥಳಿಯ ಅಕ್ಕ-ಪಕ್ಕದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಅವುಗಳನ್ನು ತೆರವುಗೊಳಿಸುವ ಮೂಲಕ ವೃತ್ತದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ಛತ್ರಪತಿ ಶಿವಾಜಿ ಮಹಾರಾಜ ಅಭಿಮಾನಿ ಬಳಗ ಮತ್ತು ಸಾರ್ವಜನಿಕರು ಶಾಸಕ ವಿಶ್ವಾಸ ವೈದ್ಯರವರಿಗೆ ಮನವಿ ಸಲ್ಲಿಸಿದರು.