ಎಲ್ಲೆಡೆ ಶಿವ ನಾಮದ ಓಂಕಾರ, ವಿಶೇಷ ಅಲಂಕಾರ, ಜಾಗರಣೆಹಿಂದೂಗಳ ಪವಿತ್ರ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿಯ ಹಬ್ಬವನ್ನು ಕಾಗವಾಡ ತಾಲೂಕಿನ ಐನಾಪುರ ಪಟ್ಟಣಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಶಿವ, ಈಶ್ವರ, ವಿಶ್ವನಾಥ,ಮಲ್ಲಯ್ಯ ,ವೀರಭದ್ರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದವು. ಅದರಂತೆ ಐನಾಪುರ ಪಟ್ಟಣದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ವಿಶ್ವನಾಥ ದೇವಾಲಯದಲ್ಲಿ ಸಡಗರ ಸಂಬ್ರಮದಿಂದ ಮಹಾಶಿವರಾತ್ರಿ ಹಬ್ಬವನ್ನು ವಿಶ್ವನಾಥ ಜೋಷಿ ನೇತೃತ್ವದಲ್ಲಿ ಆಚರಿಸಲಾಯಿತು.