ಉದ್ಯಮಿ ಅಪಹರಣ: ನಾಲ್ವರು ಆರೋಪಿಗಳ ಸೆರೆಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ಮಂಗಳವಾರ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಕಾಕದ ಈಶ್ವರ ಪರಶುರಾಮ ರಾಮಗಾನಟ್ಟಿ, ಮೂಡಲಗಿಯ ರಾಘವೇಂದ್ರ ಯಮನಪ್ಪ ಬನಾಪ್ಪಗೋಳ, ಜಮಖಂಡಿಯ ರಮೇಶ ಮಾರುತಿ ಕಾಂಬಳೆ, ಸಚಿನ್ ರಾಮಪ್ಪ ಕಾಂಬಳೆ ಬಂಧಿತ ಆರೋಪಿಗಳು. ಇನ್ನೂಳಿದವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.