ಸ್ವಾರ್ಥಕ್ಕಾಗಿ ಕಾರ್ಯಕ್ರಮ ಬಳಸಿಕೊಂಡ ಡಿ.ಟಿ. ಶ್ರೀನಿವಾಸಚಿಕ್ಕೋಡಿಯಲ್ಲಿ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಮತ್ತು ಮಾಜಿ ಶಾಸಕಿ ಪೂರ್ಣಿಮಾ ನೇತೃತ್ವದಲ್ಲಿ ನಡೆದಿದ್ದ ಹಣಬರ ಸಂಘದ ಶತಮಾನೋತ್ಸವ ಸಮಾವೇಶ ಕುರಿತಾಗಿ ಅದೇ ಸಮುದಾಯದ ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೇ ತುಳಿದು ಹಾಕಿದ್ದಿರಿ. ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.